ಪತ್ನಿಯ ಶವ ತೆಗೆದುಕೊಂಡು ಹೋಗಲು ವಾಹನ ಸಿಗದೇ ಹೆಗಲ ಮೇಲೆ ಶವವನ್ನು ಹೊತ್ತುಕೊಂಡು 10 ಕಿ.ಮೀ ನಡೆದು ಸುದ್ದಿಯಾಗಿದ್ದ ಒಡಿಶಾದ ದಾನಾ ಮಾಝೀ ಜೀವನ ಇದೀಗ ಪೂರ್ತಿ ಉಲ್ಟಾ ಆಗಿದೆ.
ಭುವನೇಶ್ವರ(ಡಿ.7): ಪತ್ನಿಯ ಶವ ತೆಗೆದುಕೊಂಡು ಹೋಗಲು ವಾಹನ ಸಿಗದೇ ಹೆಗಲ ಮೇಲೆ ಶವವನ್ನು ಹೊತ್ತುಕೊಂಡು 10 ಕಿ.ಮೀ ನಡೆದು ಸುದ್ದಿಯಾಗಿದ್ದ ಒಡಿಶಾದ ದಾನಾ ಮಾಝೀ ಜೀವನ ಇದೀಗ ಪೂರ್ತಿ ಉಲ್ಟಾ ಆಗಿದೆ.
ಸುದ್ದಿ ಕೇಳಿ ಇಡೀ ವಿಶ್ವವೇ ಮರುಗಿತ್ತು. ಈತನ ಕಥೆ ಕೇಳಿ ಬಹ್ರೇನ್ ದೊರೆ ಈತನಿಗೆ 9 ಲಕ್ಷ ರು. ನೆರವು ನೀಡಿದ್ದರು. ಹಲವು ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡಿದ್ದವು. ಪರಿಣಾಮ ನಿಧಾನವಾಗಿ ದಾನಾನ ಆರ್ಥಿಕ ಪರಿಸ್ಥಿತಿ ಚೇತರಿಕೆ ಆಯಿತು. ಪತ್ನಿಯ ಸಾವಿನ ಬಳಿಕ ಆತ ತನಗೆ ಬಂದ ದುಡ್ಡಲ್ಲಿ ಹೊಸ ಮನೆ ಕಟ್ಟಿಕೊಂಡಿದ್ದಾನೆ. ಬಳಿಕ ಮತ್ತೊಬ್ಬ ಮಹಿಳೆಯನ್ನು ಮದುವೆಯಾದ. ಇದೀಗ ಆತ 65000 ರು. ಕೊಟ್ಟು ಹೊಸ ಹೊಂಡಾ ಬೈಕ್ ಖರೀದಿಸಿದ್ದಾನೆ. ಮಕ್ಕಳಿಗೆ ಶಾಲೆಯೊಂದು ಉಚಿತ ಶಿಕ್ಷಣ ನೀಡಲು ಮುಂದೆ ಬಂದಿರುವುದರಿಂದ, ಅವರು ಹಾಸ್ಟೆಲ್’ನಲ್ಲಿದ್ದಾರೆ. ಇನ್ನು ಗ್ರಾಮಸ್ಥರಿಗೆ ಈತನ ಕುರಿತು ಬೇಸರ ಮೂಡಿದೆ.
ಆತ ಮೊದಲಿನಂತಿಲ್ಲ. ಆತನ ಜೀವನ ಶೈಲಿಯೇ ಬದಲಾಗಿದೆ. ಆತನಿಗೆ ಸರ್ಕಾರ, ಸಂಘ ಸಂಸ್ಥೆಗಳು ಎಲ್ಲಾ ರೀತಿಯ ನೆರವು ನೀಡಿವೆ. ಆದರೆ ಗ್ರಾಮಕ್ಕೆ ಯಾವುದೇ ಸವಲತ್ತು ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
