ಬೆಂಗಳೂರು[ಅ. 04]  ಡಿ.ಎಸ್.ಅರುಣ್ ಅವರನ್ನು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.

ಅರುಣ್ ಅವರು ಶಿವಮೊಗ್ಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಅವರಿಗೆ ರಾಜ್ಯ ಸಚಿವ ‌ಸ್ಥಾನಮಾನ ನೀಡಲಾಗಿದೆ. ಅರುಣ್ ಮಾಜಿ ಸಭಾಪತಿ, ಬಿಜೆಪಿ ಹಿರಿಯ ನಾಯಕ ಡಿ.ಚ್.ಶಂಕರಮೂರ್ತಿ ಅವರ ಪುತ್ರ.

ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ 17 ಜನ ಸಚಿವರು ಮಾತ್ರ  ಇದ್ದಾರೆ.  ಅನರ್ಹ ಶಾಸಕರ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಇರುವುದುರಿಂದ ಅವರಿಗೆ ಸ್ಥಾನ ಕಲ್ಪಿಸಲು ಸ್ಥಾನ ಖಾಲಿ ಇಟ್ಟುಕೊಳ್ಳಲಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಸುವರ್ಣ ನ್ಯೂಸ್ ಇಂಪ್ಯಾಕ್ಟ್: 95ರ ಗಂಗಮ್ಮಜ್ಜಿಗೆ ನಾಡ ದೊರೆ ಕೊಟ್ಟ ಮಾತು ತಪ್ಪಲಿಲ್ಲ

ಹೊನ್ನಾಳಿಯ ಶಾಸಕ ಎಂಪಿ ರೇಣುಕಾಚಾರ್ಯ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು. ಇದೀಗ ಶಿವಮೊಗ್ಗಕ್ಕೆ ಮತ್ತೊಂದು ಸಂಪುಟ ದರ್ಜೆ ಸ್ಥಾನ ಸಿಕ್ಕಿದೆ.