ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಗೆ ವಿಶೇಷ ಸವಲತ್ತು ಒದಗಿಸಿದ ಆರೋಪದ ಹಿನ್ನೆಲೆಯಲ್ಲಿ ಕಡ್ಡಾಯ ರಜೆಯ ಮೇಲೆ ತೆರಳಿದ್ದ ಡಿಜಿಪಿ ಎಚ್.ಎನ್. ಸತ್ಯನಾರಾಯಣ ರಾವ್ ಅವರಿಗೆ ಸರ್ಕಾರವು ನಿವೃತ್ತಿಯ ದಿನದಂದೇ ಹುದ್ದೆ ಕಲ್ಪಿಸಿದೆ.

ಬೆಂಗಳೂರು(ಜು.01): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಗೆ ವಿಶೇಷ ಸವಲತ್ತು ಒದಗಿಸಿದ ಆರೋಪದ ಹಿನ್ನೆಲೆಯಲ್ಲಿ ಕಡ್ಡಾಯ ರಜೆಯ ಮೇಲೆ ತೆರಳಿದ್ದ ಡಿಜಿಪಿ ಎಚ್.ಎನ್. ಸತ್ಯನಾರಾಯಣ ರಾವ್ ಅವರಿಗೆ ಸರ್ಕಾರವು ನಿವೃತ್ತಿಯ ದಿನದಂದೇ ಹುದ್ದೆ ಕಲ್ಪಿಸಿದೆ.

ಪೊಲೀಸ್ ಸೇವೆಯಿಂದ ಸೋಮವಾರ ಸತ್ಯನಾರಾಯಣ ರಾವ್ ಅವರು ನಿವೃತ್ತಿಯಾದರು. ಇದಕ್ಕೂ ಮುನ್ನ ತಾಂತ್ರಿಕ ಕಾರಣಕ್ಕಾಗಿ ಅಗ್ನಿಶಾಮಕ ಮತ್ತು ಗೃಹರಕ್ಷಕ ದಳದ ಡಿಜಿಪಿಯಾಗಿ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರವು ಸೋಮವಾರ ಆದೇಶ ಹೊರಡಿಸಿತು. ಸತ್ಯನಾರಾಯಣ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಿವೃತ್ತಿಗೊಂಡರು.

ಸೋಮವಾರ ಸಂಜೆ ಸೇವೆಯಿಂದ ನಿರ್ಗಮಿಸಿದ್ದು, ಅಗ್ನಿ ಶಾಮಕ ದಳ ಪ್ರಭಾರಿಯಾಗಿದ್ದ ಪೊಲೀಸ್ ಅಧಿಕಾರಿ ನೀಲಮಣಿ ರಾಜು ಅವರು ಮಂಗಳವಾರದಿಂದ ಪೂರ್ಣಪ್ರಮಾಣದ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸತ್ಯನಾರಾಯಣರಾವ್ ಅವರಿಗೆ ‘ವಿಷ್ಯದಲ್ಲಿ ಸರ್ಕಾರಿ ಸವಲತ್ತುಗಳು ಪಡೆಯಲು ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ನಿವೃತ್ತಿಗೂ ಮುನ್ನ ಹುದ್ದೆ ಕಲ್ಪಿಸಲಾಯಿತು ಎಂದು ಹೇಳಲಾಗಿದೆ.