Asianet Suvarna News Asianet Suvarna News

ಅಂಜನೀಪುತ್ರ ಸಿನಿಮಾ ಪ್ರದರ್ಶನ ಸ್ಥಗಿತಕ್ಕೆ ಡಿಜಿ ನೀಲಮಣಿರಾಜು ಸೂಚನೆ

ಮಧ್ಯಂತರ ಆದೇಶ ಜಾರಿಗೊಳಿಸುವಂತೆ ಸೂಚನೆ ನೀಡಿದ್ದರೂ ಪ್ರದರ್ಶನ ಸ್ಥಗಿತಗೊಳಿಸದ ನಿರ್ಮಾಪಕರ ವಿರುದ್ಧ ಕೂಡ ಕೋರ್ಟ್ ಗರಂ ಆಗಿದೆ.

DGP Direction Stop Anjaniputra Movie allover state
  • Facebook
  • Twitter
  • Whatsapp

ಬೆಂಗಳೂರು(ಡಿ.27): ಸಿಟಿ ಸಿವಿಲ್ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಅಂಜನೀಪುತ್ರ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕೆಂದು ಡಿಜಿಪಿ ನೀಲಮಣಿ ರಾಜು ಸೂಚನೆ ನೀಡಿದ್ದಾರೆ.

ಕೋರ್ಟ್ ಆದೇಶವನ್ನು ವಕೀಲರು ಡಿಜಿಪಿಗೆ ಸಂಜೆ ನೀಡಿದ್ದರು. ಕೋರ್ಟ್​ ಆದೇಶದ ಹಿನ್ನಲೆಯಲ್ಲಿ ಕಮೀಷನರ್, ಜಿಲ್ಲಾ ಎಸ್​ಪಿಗಳಿಗೆ ಡಿಜಿಪಿ ಸೂಚನೆ ನೀಡಿದ್ದಾರೆ. ಮಧ್ಯಂತರ ಆದೇಶ ಜಾರಿಗೊಳಿಸುವಂತೆ ಸೂಚನೆ ನೀಡಿದ್ದರೂ ಪ್ರದರ್ಶನ ಸ್ಥಗಿತಗೊಳಿಸದ ನಿರ್ಮಾಪಕರ ವಿರುದ್ಧ ಕೂಡ ಕೋರ್ಟ್ ಗರಂ ಆಗಿದೆ. ವಕೀಲರ ಬಗ್ಗೆ ವಿವಾದಿತ ಸಂಭಾಷಣೆಯಿರುವ ಬಗ್ಗೆ ವಕೀಲ ನಾರಾಯಣಸ್ವಾಮಿ ಸೇರಿ 5 ಮಂದಿ ವಕೀಲರು ಅರ್ಜಿ ಸಲ್ಲಿಸಿದ್ದರು.

Follow Us:
Download App:
  • android
  • ios