ಕುಣಿಗಲ್ : ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಶೀಘ್ರ ಗುಣಮುಖರಾಗಲಿ ಎಂದು ಆಶಿಸಿ ನೂರಾರು ಭಕ್ತರು  ಕಗ್ಗೆರೆ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. 

ಬಳಿಕ ಸಿದ್ದಲಿಂಗೇಶ್ವರ ಶತಮಾನೋತ್ಸವ ಸಮಿತಿ ಸದಸ್ಯರು ಅಭಿಷೇಕದ ನಂತರ ಚೆನ್ನೈಗೆ ಪ್ರಸಾದ ಕೊಂಡೊಯ್ದರು. ಸಿದ್ದಲಿಂಗೇಶ್ವರನ ಮುಂದೆ ಡಾ. ಶಿವಕುಮಾರಸ್ವಾ ಸ್ವಾಮೀಜಿ ಅವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದರು. 

ಐವತ್ತೈದು ಲೀಟರ್ ಹಾಲು, ಎಳನೀರು ಕಬ್ಬು, ದ್ರಾಕ್ಷಿ ಸೇರಿದಂತೆ ಹಲವಾರು ದ್ರವ್ಯ ಉಪಯೋಗಿಸಿ ರುದ್ರಾಭಿಷೇಕ ನೆರವೇರಿಸಲಾಯಿತು.