ತಾಲೂಕಿನ ಕರಿಬಸಮ್ಮ  ದೇವಿಯ ದೇವಸ್ಥಾನದ ಮುಂಭಾಗದಲ್ಲಿ ವಿಜಯಕುಮಾರ್ ಪವಾರ್ ಎಂಬ ಭಕ್ತ ಅನುಷ್ಠಾನಕ್ಕೆ ಕುಳಿತಿದ್ದಾನೆ.

ಕಲಬುರಗಿ (ಡಿ.06): ತಾಲೂಕಿನ ಕರಿಬಸಮ್ಮ ದೇವಿಯ ದೇವಸ್ಥಾನದ ಮುಂಭಾಗದಲ್ಲಿ ವಿಜಯಕುಮಾರ್ ಪವಾರ್ ಎಂಬ ಭಕ್ತ ಅನುಷ್ಠಾನಕ್ಕೆ ಕುಳಿತಿದ್ದಾನೆ.

ದೇವಿ ಕನಸಿನಲ್ಲಿ ಬಂದು ಹೇಳಿದ್ದಾರೆ ಅನ್ನೋ ಕಾರಣಕ್ಕೆ ನಿನ್ನೆ ಸಂಜೆ 5 ಗಂಟೆಗೆ ನಾಲ್ಕು ಅಡಿ ತಗ್ಗು ತೆಗೆದು ಅದರಲ್ಲಿ ವಿಜಯಕುಮಾರ್ ಕುಳಿತಿದ್ದಾರೆ. ಅವರಿಗೆ ವಿಭೂತಿ, ಕುಂಕುಮ, ಭಂಡಾರ ಹಾಕಿ ತಲೆಯವರೆಗೂ ಮಣ್ಣು ಮುಚ್ಚಿ ಆನಂತರ ಅರ್ಧ ಭೂ ಒಳಭಾಗದಿಂದ ಹಿಡಿದು ಮೇಲ್ಭಾಗ ನಾಲ್ಕು ಅಡಿವರೆಗೂ ಬೇವಿನ ತಪ್ಪಲಿನಿಂದ ಮುಚ್ಚಿದ್ದಾರೆ. ಇನ್ನು ನಾಳೆ ಬೆಳಗ್ಗೆ 10.10ಕ್ಕೆ ಇವರ ಅನುಷ್ಠಾನ ಮುಗಿಯಲಿದ್ದು ಅದ್ದೂರಿಯಾಗಿ ಅವರನ್ನ ಭೂಮಿಯ ಆಳದಿಂದ ಹೊರ ತೆಗೆಯಲಿದ್ದಾರೆ. ವಿಜಯಕುಮಾರ್ ಕಲಬುರಗಿಯ ನಂದಿಕೂರ್ ಗ್ರಾಮದ ನಿವಾಸಿಯಾಗಿದ್ದು, ಕಟ್ಟಡಗಳ ಕಾಂಟ್ರಾಕ್ಟರ್ ಆಗಿ ಕೆಲಸ‌ ಮಾಡುತ್ತಿದ್ದ. ಅವನಿಗೆ ಮದುವೆಯಾಗಿ ಎರಡು ಮಕ್ಕಳು ಕೂಡ ಇದ್ದಾರೆ.