ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿ ಗರ್ಭಗುಡಿ ಬಾಗಿಲಿಗೆ ಭಕ್ತರೊಬ್ಬರು ಚಿನ್ನದ ಬಾಗಿಲು ಅರ್ಪಿಸಿದ್ದಾರೆ.

ಮೈಸೂರು (ಅ.29): ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿ ಗರ್ಭಗುಡಿ ಬಾಗಿಲಿಗೆ ಭಕ್ತರೊಬ್ಬರು ಚಿನ್ನದ ಬಾಗಿಲು ಅರ್ಪಿಸಿದ್ದಾರೆ.

ನವದುರ್ಗೆಯರ ಚಿನ್ನದ ಪಟ್ಟಿ ಬಾಗಿಲನ್ನು ಭಕ್ತರೊಬ್ಬರು ಅರ್ಪಿಸಿದ್ದಾರೆ. ಬೆಂಗಳೂರು ಮೂಲದ ವಕೀಲ ಜಯಶ್ರೀ ಶ್ರೀಧರ್ ಎಂಬುವರು ತಾಯಿ ಚಾಮುಂಡೇಶ್ವರಿ ಗರ್ಭಗುಡಿಗೆ ಬಾಗಿಲಿಗೆ ಕೋಟ್ಯಂತರ ರೂ. ಮೌಲ್ಯದ ನವದುರ್ಗೆಯರ ಚಿನ್ನದ ಪಟ್ಟಿ ಬಾಗಿಲನ್ನು ಅರ್ಪಿಸಿದರು. ಚಾಮುಂಡೇಶ್ಚರಿ ಬಳಿ ಹರಕೆ ಹೊತ್ತುಕೊಂಡಿದ್ದ ಜಯಶ್ರೀ ಶ್ರೀಧರ್, ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ಬಾಗಿಲು ಮಾಡಿಸಲು ಎರಡು ವರ್ಷಗಳ ಹಿಂದೆಯೇ ಅನುಮತಿ ಪಡೆದುಕೊಂಡಿದ್ದರು. ನವದುರ್ಗೆಯರ ಚಿನ್ನದ ಪಟ್ಟಿ ಬಾಗಿಲು ಸಂಪೂರ್ಣಗೊಂಡ ನಂತರ ದೇವಸ್ಥಾನ ಗರ್ಭಗುಡಿ ಬಾಗಿಲಿಗೆ ಅರ್ಪಿಸಿ ಭಕ್ತಿ ಮೆರೆದಿದ್ದಾರೆ.