ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಮರು ಆಯ್ಕೆ: ಠಾಕ್ರೆಗೆ ಧನ್ಯವಾದ ಎಂದ ಫಡ್ನವೀಸ್!
ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವೀಸ್| ದಕ್ಷಿಣ ಮುಂಬೈನ ವಿಧಾನ ಭವನದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ| ಇತ್ತೀಚಿಗೆ ಆಯ್ಕೆಯಾದ ಎಲ್ಲಾ 105 ಬಿಜೆಪಿ ಶಾಸಕರಿಂದ ಫಡ್ನವೀಸ್'ಗೆ ಬೆಂಬಲ| ಬಿಜೆಪಿ ಶಾಸಕರಿಗೆ ಹಾಗೂ ಉದ್ಧವ್ ಠಾಕ್ರೆ ಅವರಿಗೆ ಧನ್ಯವಾದ ಅರ್ಪಿಸಿದ ಫಡ್ನವೀಸ್|
ಮುಂಬೈ(ಅ.30): ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮತ್ತೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ.
50-50ಕ್ಕೆ ಲಿಖಿತ ಭರವಸೆ ಕೊಡಿ: ಅಪನಂಬಿಕೆಯ ಹಗ್ಗದ ಮೇಲೆ ಬಿಜೆಪಿ-ಶಿವಸೇನೆ ಜೋಡಿ!
ಇಂದು ದಕ್ಷಿಣ ಮುಂಬೈನ ವಿಧಾನ ಭವನದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ, ಇತ್ತೀಚಿಗೆ ಆಯ್ಕೆಯಾದ ಎಲ್ಲಾ 105 ಬಿಜೆಪಿ ಶಾಸಕರು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಫಡ್ನವೀಸ್ ಅವರನ್ನು ಮರು ಆಯ್ಕೆ ಮಾಡಿದರು.
ಮಹಾರಾಷ್ಟ್ರದಲ್ಲಿ ಬಹುಮತವಿದ್ದರೂ ಸರ್ಕಾರ ರಚಿಸಿಲು ಒದ್ದಾಡುತ್ತಿದೆ ಬಿಜೆಪಿ!
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಪಕ್ಷದ ಉಪಾಧ್ಯಕ್ಷ ಅವಿನಾಶ್ ರೈ ಖನ್ನಾ ಕೇಂದ್ರದ ವೀಕ್ಷಕರಾಗಿ ಆಗಮಿಸಿದ್ದರು. ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಫಡ್ನವೀಸ್ ಹೊರತುಪಡಿಸಿ ಬೇರೆ ಯಾವುದೇ ಹೆಸರು ಪ್ರಸ್ತಾಪವಾಗಿಲ್ಲ ಎಂದು ತೋಮರ್ ಸ್ಪಷ್ಟಪಡಿಸಿದ್ದಾರೆ.
ಶಿವಸೇನೆಯ 45 ಶಾಸಕರಿಗೆ ಫಡ್ನವೀಸ್ ಸಿಎಂ ಆಗ್ಬೇಕು: ಕಾಕಡೆ ಬಾಂಬ್!
ಇದೇ ವೇಳೆ ಶಾಸಕಂಗ ಪಕ್ಷದ ನಾಯಕನಾಗಿ ಮರು ಆಯ್ಕೆಗೊಂಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಫಡ್ನವೀಸ್, ತಮ್ಮ ಮೇಲೆ ವಿಶ್ವಾಸವಿಟ್ಟಿರುವ ಎಲ್ಲಾ ಶಾಸಕರಿಗೆ ಹಾಗೂ ಪಕ್ಷದ ನಾಯಕರಿಗೆ ಧನ್ಯವಾದ ಅರ್ಪಿಸಿದರು. ಅಲ್ಲದೇ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೂ ಫಡ್ನವೀಸ್ ಧನ್ಯವಾದ ಸಲ್ಲಿಸಿದರು.
ಇನ್ನೂ ಮುಗಿಯದ ಮಹಾ ಬಿಕ್ಕಟ್ಟು, ಅದ್ಯಾವಾಗ ಸರ್ಕಾರ ರಚನೆಯಾಗುತ್ತೋ ಗೊತ್ತಿಲ್ಲ