ರಾಷ್ಟ್ರ  ರಾಜಕಾರಣದಲ್ಲಿ ಮಹತ್ವದ ಸಂಚಲನವೊಂದು ನಡೆದಿದೆ. ನಿನ್ನೆ ಬಿಹಾರದ ರಾಜಕೀಯ ಬೆಳವಣಿಗೆ ರಾಷ್ಟ್ರ ಮಟ್ಟದಲ್ಲಿ   ಸುದ್ದಿಯಾಗಿದ್ದು, ಯಾರು ಕೂಡಾ ಉಹಿಸಿರದ ಬೇಳವಣಿಗೆ ಬೀಹಾರದ ರಾಜಕೀಯ ವಲಯದಲ್ಲಿ ನಡೆದಿದೆ..

ಬಿಹಾರ(ಜು.27): ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಸಂಚಲನವೊಂದು ನಡೆದಿದೆ. ನಿನ್ನೆ ಬಿಹಾರದ ರಾಜಕೀಯ ಬೆಳವಣಿಗೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು, ಯಾರು ಕೂಡಾ ಉಹಿಸಿರದ ಬೇಳವಣಿಗೆ ಬೀಹಾರದ ರಾಜಕೀಯ ವಲಯದಲ್ಲಿ ನಡೆದಿದೆ.

ಕಾಂಗ್ರೆಸ್ ಮುಕ್ತ ಭಾರತದತ್ತ

ವಾಯ್ಸ್: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ 20 ತಿಂಗಳುಗಳ ಹಿಂದೆ ಬಿಹಾರದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಜೆಡಿಯು-ಆರ್‌.ಜೆ.ಡಿ. -ಕಾಂಗ್ರೆಸ್‌ ಮಹಾಮೈತ್ರಿ ಮುರಿದು ಬಿದ್ದಿದೆ.. ಬಿಹಾರ ಉಪಮುಖ್ಯಮಂತ್ರಿ ಹಾಗೂ ಲಾಲೂ ಪ್ರಸಾದ್‌ ಯಾದವ್‌ ಪುತ್ರ ತೇಜಸ್ವಿ ಯಾದವ್‌ ವಿರುದ್ಧದ ಭೂ ಅಕ್ರಮ ಪ್ರಕರಣಗಳಿಂದ ರೋಸಿ ಹೋಗಿದ್ದ ನಿತೀಶ್ ಹಠಾತ್ತಾಗಿ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಈ ಮೈತ್ರಿಕೂಟವನ್ನು ಉಳಿಸಿಕೊಳ್ಳುವಲ್ಲಿ ನಾನು ಕೊನೆಯ ಹಂತದವರೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ, ಆದರೆ ಕೊನೆಯಲ್ಲಿ ನನಗೆ ರಾಜೀನಾಮೆ ನೀಡದೆ ಬೇರೆ ಮಾರ್ಗವೇ ಇರಲಿಲ್ಲ. ಬಿಹಾರದ ಜನತೆಯ ಸೇವೆಗೆ ನಾನು ಈಗಲೂ ಬದ್ಧನಾಗಿದ್ದೇನೆ, ಆದರೆ ಪ್ರಸಕ್ತ ಸನ್ನಿವೇಶದಲ್ಲಿ ನಾನು ಜನರ ಸೇವೆಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲವಾಗಿದ್ದರಿಂದ ರಾಜೀನಾಮೆಯನ್ನು ನೀಡುವುದು ಅನಿವಾರ್ಯವಾಯಿತು.

-ನಿತೀಶ್ ಕುಮಾರ್​, ಬಿಹಾರ ಸಿಎಂ

ಜೆಡಿಯುಗೆ ಬಿಜೆಪಿ ಬೇಷರತ್ ಬೆಂಬಲ

ಇನ್ನೂ ಲಾಲು ಸಂಬಂಧ ಕಡಿದುಕೊಂಡು ರಾಜೀನಾಮೆ ಕೊಟ್ಟ ಬೆನ್ನಲ್ಲೇ ಇತ್ತ ಹೊಸ ಸರ್ಕಾರ ರಚನೆಗೆ ನಿತೀಶ್​ಗೆ ಬಿಜೆಪಿ ಬೇಷರತ್ ಬೆಂಬಲ ನೀಡಿದೆ.. ನಿತೀಶ್‌ ಕುಮಾರ್‌ ನಿವಾಸದಲ್ಲಿ ಸಭೆ ನಡೆಸಿದ ಬಿಜೆಪಿ ಮತ್ತು ಜೆಡಿಯು ಶಾಸಕರು ನಿತೀಶ್‌ ಕುಮಾರ್ ನಮ್ಮ ನಾಯಕ ಎಂದು ಘೋಷಿಸಿದ್ರು.. ಬಿಹಾರ ಬಿಹಾರದ ಬಿಜೆಪಿ ರಾಜ್ಯಾಧ್ಯಕ್ಷ ಸುಶೀಲ್ ಕುಮಾರ್ ರಾಜ್ಯಪಾಲರಿಗೂ ಈ ಮಾಹಿತಿ ನೀಡಿದ್ದಾರೆ.. ಹೀಗಗಾಗಿ ಇಂದು ಪಾಟ್ನಾದಲ್ಲಿ ಮತ್ತೊಮ್ಮೆ ಸಿಎಂ ಆಗಿ ನಿತೀಶ್ ಪ್ರಮಾಣ ವಚನ ಸ್ವೀಕರಿಸುವುದು ಪಕ್ಕಾ ಆಗಿದೆ

ಇನ್ನೂ ಬಿಜೆಪಿ ಹಾಗೂ ಜೆಡಿಯು ಮೈತ್ರಿ ಬಲಾಬಲ ನೋಡೋದಾದ್ರೆ..

ಬಿಹಾರದ ವಿಧಾನಸಭೆಯಲ್ಲಿ ಒಟ್ಟು ಸದಸ್ಯ ಬಲ 243. ಮ್ಯಾಜಿಕ್ ನಂಬರ್ 122, ಜೆ ಡಿ ಯು 71 ಶಾಸಕರ ಬಲಕ್ಕೆ ಬಿಜೆಪಿ 53 ಶಾಸಕರು ಸೇರಿ.. ಒಟ್ಟು 124 ಸದಸ್ಯ ಬಲವಾಗುತ್ತೆ. ಇಂದು ನಿತೀಶ್ ಮತ್ತೊಮ್ಮೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ರೆ, ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.. ಇನ್ನೂ ಜೆಡಿಯು ಹಾಗೂ ಬಿಜೆಪಿ ತಲಾ 14 ಸಚಿವ ಸ್ಥಾನ ಹಂಚಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.. ಇನ್ನೂ ಇತ್ತ ನಿನ್ನೆ ರಾತ್ರಿಯಿಡೀ ರಾಜಭವನದ ಎದುರು ತೇಜಸ್ವಿ ಯಾದವ್ ನೇತೃತ್ವದಲ್ಲಿ ಪ್ರತಿಭಟನೆಯ ಹೈಡ್ರಾಮಾ ನಡೆಸಿದ್ರು.. ಅಲ್ಲದೇ ಇದೆಲ್ಲ ಬಿಜೆಪಿ ಪಿತೂರು ಎಂದಿರುವ ಲಾಲು ಪ್ರಸಾದ್ ಯಾದವ್ ನಿತೀಶ್ ವಿರುದ್ಧವೂ ಕೊಲೆ ಆರೋಪ ಇದೆ ಎಂದು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಏಕಾಏಕಿ ಬಿಹಾರ ರಾಜಕಾರಣದಲ್ಲಿ ಭಾರೀ ಹೈಡ್ರಾಮ ನಡೆದಿದ್ದು. ಇಂದು ಕೂಡ ಸಾಕಷ್ಟು ಬೆಳವಣಿಗೆಗಳಿಗೆ ಬಿಹಾರ ಸಾಕ್ಷಿಯಾಗಲಿದೆ.