Asianet Suvarna News Asianet Suvarna News

ಭಾರತ ವಿಶ್ವಾಸಾರ್ಹ ದೇಶವೆಂದು ಸಾಬೀತುಪಡಿಸಿದೆ; ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಲಿದ್ದೇವೆ: ಮಾರ್ಕೆಲ್

ಭಾರತ-ಜರ್ಮನಿ ನಡುವೆ ಬೇರೆ ಬೇರೆ ವಲಯಗಳ 8 ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಹಿ ಹಾಕಿದ್ದಾರೆ. ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಜೊತೆ ನಾಲ್ಕು ಸುತ್ತಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

Development of Indo German relations is fast positive and clear PM Narendra Modi in Berlin
  • Facebook
  • Twitter
  • Whatsapp

ನವದೆಹಲಿ (ಮೇ.30): ಭಾರತ-ಜರ್ಮನಿ ನಡುವೆ ಬೇರೆ ಬೇರೆ ವಲಯಗಳ 8 ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಹಿ ಹಾಕಿದ್ದಾರೆ. ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಜೊತೆ ನಾಲ್ಕು ಸುತ್ತಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

ಜರ್ಮನಿ ಜೊತೆ ವ್ಯಾಪಕವಾಗಿ ಕೆಲಸ ಮಾಡಲು ಭಾರತ ಬಯಸುತ್ತದೆ ಎಂದು ಮೋದಿ ಹೇಳಿದರೆ ಭಾರತ ವಿಶ್ವಾಸಾರ್ಹ ದೇಶ ಎಂದು ಸಾಬೀತುಪಡಿಸಿದೆ. ಉಭಯ ದೇಶಗಳು ಪರಸ್ಪರ ಸಹಕಾರದಲ್ಲಿ ಕೆಲಸ ಮಾಡಲು ಬದ್ಧವಾಗಿದೆ ಎಂದು ಮಾರ್ಕೆಲ್ ಹೇಳಿದ್ದಾರೆ.

ದ್ವಿಪಕ್ಷೀಯ ಮಾತುಕತೆಯಲ್ಲಿ ಉಭಯ ದೇಶದ ನಾಯಕರು ಭಯೋತ್ಪಾದನೆಯನ್ನು ಖಂಡಿಸಿದ್ದಾರೆ. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವವರ, ಅವರಿಗೆ ಹಣ, ಜಾಗವನ್ನು ಪೂರೈಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎರಡೂ ದೇಶಗಳು ಪಣ ತೊಟ್ಟಿವೆ. ಭಾರತ ಮತ್ತು ಯುರೋಪ್ ಗೆ ಭಯೋತ್ಪಾದಕರ ಭಯವಿದೆ. ಜಿ20 ಪ್ರಣಾಳಿಕೆಯಲ್ಲಿ ಇದಕ್ಕೆ ಅಂತ್ಯ ಹಾಡುವುದೇ ನಮ್ಮ ಉದ್ದೇಶವೆಂದು ಮಾರ್ಕೆಲ್ ಹೇಳಿದ್ದಾರೆ.

ಇದಕ್ಕೂ ಮುನ್ನ ಜರ್ಮನಿ ಸೇನೆಯು ಭಾರತದ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಮೋದಿಗೆ ಗೌರವ ಸಲ್ಲಿಸಿತು.

ಪ್ರಧಾನಿ ಮೋದಿಯನ್ನು ಸೇನಾ ಗೌರವದೊಂದಿಗೆ ಚಾನ್ಸಲರ್ ಹಾಗೂ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು.  ಬಳಿಕ ತಮ್ಮ ಜೊತೆ ಬಂದಿದ್ದ ಹಿರಿಯ ಅಧಿಕಾರಿಗಳನ್ನು ಮೋದಿಯವರು ಮಾರ್ಕೆಲ್ ಗೆ ಪರಿಚಯ ಮಾಡಿಕೊಟ್ಟರು.

Follow Us:
Download App:
  • android
  • ios