ಸುವರ್ಣ ನ್ಯೂಸ್`ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಯೂಟರ್ನ್

ಹಾಸನ(ಸೆ.11): ತಮಿಳುನಾಡಿಗೆ ನೀರು ಬಿಡಲು ನಾನೇ ಹೇಳಿದ್ದೇ ಎಂದಿದ್ದ ದೇವೇಗೌಡರು, ಸುವರ್ಣ ನ್ಯೂಸ್`ನಲ್ಲಿ ಪ್ರಸಾರವಾಗುತ್ತಿದ್ದಂತೆ ಇದೀಗ ಯೂಟರ್ನ್ ಹೊಡೆದಿದ್ದಾರೆ. ನೀರು ಬಿಡಲು ಮುಖ್ಯಮಂತ್ರಿಗಳೇ ತೀರ್ಮಾನ ಮಾಡಿದ್ದರು ಎನ್ನುತ್ತಿದ್ದಾರೆ. ಹಾಸನದಲ್ಲಿ ಮಾತನಾಡಿದ ದೇವೇಗೌಡರು, ನಾನು ಹೇಳುವ ಅವಶ್ಯಕತೆ ಇರಲಿಲ್ಲ. ನಾನು ನೀರು ಬಿಡಿ ಎಂದು ಹೇಳಿಲ್ಲ, ಅವರೇ ನೀರು ಬಿಡಲು ಸಿಎಂ ತೀರ್ಮಾನ ಮಾಡಿದ್ದರು ಎಂದಿದ್ದಾರೆ.

ಸರ್ಕಾರವೇ ನಿರ್ಧರಿಸದ ಮೇಲೆ ನಾನು ಹೇಳುವುದು ಏನಿದೆ? ಸರ್ಕಾರ ತನ್ನ ಮರ್ಯಾದೆಯನ್ನು ಉಳಿಸಿಕೊಳ್ಳಬೇಕು. ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸುವಂತಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿದೆ ಎಂದು ದೇವೇಗೌಡರು ಹೇಳಿದ್ದಾರೆ.