ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜೀವನ ಚರಿತ್ರೆಯನ್ನು ಶಾಸಕ ವೈ.ಎಸ್.ವಿ. ದತ್ತಾ ರಚಿಸುತ್ತಿದ್ದಾರೆ. ಈ ಕೃತಿಯು ನವೆಂಬರ್ ಒಳಗೆ ಬಿಡುಗಡೆಯಾಗಲಿದೆ. ಸ್ವತಃ ಈ ವಿಷಯವನ್ನು ವೈ.ಎಸ್.ವಿ. ದತ್ತಾ ತಿಳಿಸಿದ್ದಾರೆ.

ಶಿವಮೊಗ್ಗ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜೀವನ ಚರಿತ್ರೆಯನ್ನು ಶಾಸಕ ವೈ.ಎಸ್.ವಿ. ದತ್ತಾ ರಚಿಸುತ್ತಿದ್ದಾರೆ.

ಈ ಕೃತಿಯು ನವೆಂಬರ್ ಒಳಗೆ ಬಿಡುಗಡೆಯಾಗಲಿದೆ. ಸ್ವತಃ ಈ ವಿಷಯವನ್ನು ವೈ.ಎಸ್.ವಿ. ದತ್ತಾ ತಿಳಿಸಿದ್ದಾರೆ.

ದೇವೇಗೌಡರ ರಾಜಕೀಯ ಜೀವನದಲ್ಲಿ ಎದುರಾದ ಸಮಸ್ಯೆಗಳು, ರಾಜಕೀಯ ಹೋರಾಟ, ರೈತರ ಬಗೆಗಿನ ಕಾಳಜಿ, ಕೆಲವು ಸನ್ನಿವೇಶಗಳಲ್ಲಿ ಎದುರಿಸಿದ ಘಟನೆಗಳು, ಇನ್ನು ಮುಂತಾದ ವಿಷಯಗಳ ಸಮಗ್ರ ವಾಸ್ತವಿಕ ಸತ್ಯವನ್ನು ಈ ಜೀವನ ಚರಿತ್ರೆ ಒಳಗೊಂಡಿರುತ್ತದೆ.

1973ರಿಂದಲೂ ಜನತಾ ಪರಿವಾರದಲ್ಲಿ ಹಾಗೂ ದೇವೇಗೌಡರ ಅನುಯಾಯಿಯಾಗಿ, ಬೆಂಬಲಿಗನಾಗಿ, ಒಡನಾಡಿಯಾಗಿ ರಾಜಕೀಯ ಜೀವನ ನಡೆಸುತ್ತಿದ್ದೇನೆ. ಇದೀಗ ಅವರ ಜೀವನ ಚರಿತ್ರೆ ಬರೆಯುತ್ತಿದ್ದು, ನವೆಂಬರ್ ವೇಳೆಗೆ ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ರಾಜಕಾರಣ ಸೇರಿಕೊಂಡಿದೆ. ಹೀಗಾಗಿಯೇ ವಿಷಯ ದಿನಕ್ಕೊಂದು ತಿರುವು ಪಡೆಯುತ್ತಿದೆ ಎಂದರು.

ಇದು ಪ್ರತ್ಯೇಕ ಧರ್ಮವಾಗಬೇಕು. ಕೇವಲ ವೀರಶೈವರು ಮಾತ್ರ ಈ ಧರ್ಮದಲ್ಲಿ ಇರಬಾರದು, ಬಸವಣ್ಣನವರ ಅನುಯಾಯಿಗಳು ಹಾಗೂ ವಚನಕಾರರು ಎಲ್ಲರೂ ಸಹ ವೀರಶೈವ ಧರ್ಮಕ್ಕೆ ಒಳಪಡುತ್ತಾರೆ ಎಂದು ಹೇಳಿದರು.