ಬೆಂಗಳೂರು (ಅ.01): ಕಾವೇರಿ ನೀರು ಬಿಡುವುದಿಲ್ಲವೆಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡ ಕೇಂದ್ರ ಸಚಿವರ ಮನವೊಲಿಕೆ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರ ಸಚಿವರಾದ ಅನಂತಕುಮಾರ್​, ಡಿ.ವಿ ಸದಾನಂದ ಗೌಡ ದೇವೇಗೌಡರನ್ನು ಭೇಟಿಯಾಗಿ ಪ್ರಧಾನಿ ಮೋದಿ ಪರವಾಗಿ ಮನವೊಲಿಸಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅವರ ಮಾತಿನನ್ವಯ ದೇವೆಗೌಡರು ಉಪವಾಸ ಕೈಬಿಟ್ಟಿದ್ದಾರೆ.

ಮಂತ್ರಿಪರಿಷತ್ ಸಭೆ ನಡೆತಿದೆ. ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ತಿಳಿಸುವಂತೆ ಹೇಳಿದ್ದೀನಿ. ಈಗ ತಾತ್ಕಾಲಿಕವಾಗಿ ಉಪವಾಸ ಸತ್ಯಾಗ್ರಹ ವಾಪಸ್ ಪಡೆದಿದ್ದೇನೆ.ಮತ್ತೆ ಕೇಂದ್ರ ಹೇಳಿದಂತೆ ನಡೆದುಕೊಂಡಿಲ್ಲ ಅಂದ್ರೆ ಉಪವಾಸ ಸತ್ಯಾಗ್ರಹ ಕೂರಬೇಕಾಗುತ್ತದೆ ಎಂದು ಗೌಡರು ಗುಡುಗಿದ್ದಾರೆ.