ಸಿದ್ದರಾಮಯ್ಯರಿಂದ ಕಾಂಗ್ರೆಸ್ ಬೆತ್ತಲೆಯಾಗಿದೆ: ದೇವೇಗೌಡರ ಲೇವಡಿ

Deve gowda Slams CM Siddaramaiah
Highlights

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಜಿ.ಪರಮೇಶ್ವರ್ ಅವರನ್ನು ಸೋಲಿಸಿದ್ರು.  ಕೊರಟಕೆರೆಯಲ್ಲಿ ಸಿದ್ದರಾಮಯ್ಯ ತಮ್ಮ ಸಮಾಜದ ಮತಗಳನ್ನ ಜೆಡಿಎಸ್ ಗೆ ಹಾಕಿಸಿದ್ರು. ಪರಮೇಶ್ವರ್ ಸೋತ ಮೇಲೆ ಸಿದ್ದರಾಮಯ್ಯ ಸಿಎಂ ಆಗಿದ್ದು ಎಂದು ಜಿ ಟಿ ದೇವೇಗೌಡರು ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ಏ. 08): ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಜಿ.ಪರಮೇಶ್ವರ್ ಅವರನ್ನು ಸೋಲಿಸಿದ್ರು.  ಕೊರಟಕೆರೆಯಲ್ಲಿ ಸಿದ್ದರಾಮಯ್ಯ ತಮ್ಮ ಸಮಾಜದ ಮತಗಳನ್ನ ಜೆಡಿಎಸ್ ಗೆ ಹಾಕಿಸಿದ್ರು. ಪರಮೇಶ್ವರ್ ಸೋತ ಮೇಲೆ ಸಿದ್ದರಾಮಯ್ಯ ಸಿಎಂ ಆಗಿದ್ದು ಎಂದು ಜಿ ಟಿ ದೇವೇಗೌಡರು ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯ ಪಾದದ ಕೆಳಗೆ ಇದೆ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗಿನಂತಿದೆ. ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಪಕ್ಷ ಬೆತ್ತಲೆಯಾಗಿದೆ. ಪರಮೇಶ್ವರ್ ಉಪಮುಖ್ಯ ಮಂತ್ರಿ ಮಾಡಿ ಅನ್ನೊ ಕೂಗು ಶಮನ ಮಾಡಿದ್ದು ಸಿದ್ದರಾಮಯ್ಯ.  ಸಿದ್ದರಾಮಯ್ಯಗೆ ಕುಮಾರಸ್ವಾಮಿ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ.  ಒಕ್ಕಲಿಗರನ್ನ ಸಿದ್ದರಾಮಯ್ಯ ಎತ್ತಿಕಟ್ಟಿದ್ದಾರೆ.  ಕಾಂಗ್ರೆಸ್’ನಲ್ಲಿ ಉಳಿಗಾಲವಿಲ್ಲ ಅಂತಾ ಜೆಡಿಎಸ್ ಪಕ್ಷ ಸೇರುತ್ತಿದ್ದಾರೆ. ಸಿದ್ದರಾಮಯ್ಯ ಜೊತೆ ಯಾರು ಬರುತ್ತಿಲ್ಲ.  ಯಾವ ಊರಿನಲ್ಲೂ ಸಿಎಂಗೆ ಉತ್ತಮ ಸ್ಪಂದನೆ ಸಿಗುತ್ತಿಲ್ಲ ಎಂದು ಟೀಕಿಸಿದ್ದಾರೆ. 

ವೀರಶೈವ ಸಮಾಜವನ್ನು ಸಿದ್ದರಾಮಯ್ಯ ಇಬ್ಭಾಗ ಮಾಡಿದ್ರು. ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಜನ ತೀರ್ಮಾನ ಮಾಡ್ತಿದ್ದಾರೆ.  ರಾಹುಲ್  ಗಾಂಧಿ ಜೊತೆಗೆ ಕಾಂಗ್ರೆಸ್ ನಾಯಕರು ತೆಗೆಸಿಕೊಂಡ ಪೋಟೊ ಉದಾಹರಿಸಿ ಕಾಂಗ್ರೆಸ್ ನಾಯಕರ ಸ್ಥಿತಿಯನ್ನು ಜಿ ಟಿ.ದೇವೇಗೌಡರು ಲೇವಡಿ ಮಾಡಿದ್ದಾರೆ. 

ಹೊರಗಿನಿಂದ ಕಾಂಗ್ರೆಸ್’ಗೆ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಮೂಲ ಕಾಂಗ್ರೆಸ್ ನಾಯಕರು ಏನೂ ಮಾಡುತ್ತಿಲ್ಲ. ಡಿಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ,  ಜಿ.ಪರಮೇಶ್ವರ್ ಸೆರಗು ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 
 

loader