Asianet Suvarna News Asianet Suvarna News

ಪ್ರಧಾನಿ ಕಚೇರಿ ಸಂಪರ್ಕಿಸುವ ಬಗೆ: ಮೋದಿ ಮಾತನಾಡಿಸೋದು ಹೇಗೆ?

ಮೋದಿ 2.0 ಸರ್ಕಾರ ಅಧಿಕೃತ ಕಾರ್ಯಾರಂಭ| ಜವಾಬ್ದಾರಿಯತ್ತ ಮುಖ ಮಾಡಿದ ಮೋದಿ ಸಂಪುಟ| ಪ್ರಧಾನಿ ಕಚೇರಿ ಸಂಪರ್ಕಿಸುವ ಬಗೆ ಹೇಗೆ?| ಪ್ರಧಾನಿ ಮೋದಿಯೊಂದಿಗೆ ನೇರವಾಗಿ ಮಾತನಾಡುವ ಬಗೆ ಏನು?| ಪ್ರಧಾನಿ ಕಚೇರಿ ಸಂಪರ್ಕಿಸುವ ಕುರಿತು ಮಾಹಿತಿ| 

Details To Contact Prime Minister Office
Author
Bengaluru, First Published Jun 2, 2019, 6:02 PM IST

ನವದೆಹಲಿ(ಜೂ.02): ಪ್ರಧಾನಿ ಮೋದಿ 2.0 ಸರ್ಕಾರ ಅಧಿಕೃತ ಕಾರ್ಯಾರಂಭ ಮಾಡಿದ್ದು, ಪ್ರಧಾನಿಯಾದಿಯಾಗಿ ಸಚಿವರು, ಸಂಸದರೆಲ್ಲಾ ತಮ್ಮ ತಮ್ಮ ಜವಾಬ್ದಾರಿಗಳತ್ತ ಮುಖ ಮಾಡಿದ್ದಾರೆ.

ಅದರಂತೆ ಪ್ರಧಾನಿ ಕಾರ್ಯಾಲಯ ಕೂಡ ತನ್ನ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ಮೋದಿ 2.0 ಸರ್ಕಾರಕ್ಕೆ ಹೆಗಲು ಕೊಟ್ಟಿದೆ.

ಮೋದಿ ಪ್ರಧಾನಿಯಾದ ಬಳಿಕ ಪ್ರಧಾನಿ ಕಚೇರಿಯನ್ನು ಮತ್ತಷ್ಟು ಜನಸ್ನೇಹಿಗೊಳಿಸಲಾಗಿದ್ದು, ಸಾಮಾನ್ಯ ಪ್ರಜೆ ಕೂಡ ನೇರವಾಗಿ ಪ್ರಧಾನಿ ಜೊತೆ ಸಂಪರ್ಕ ಸಾಧಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಜನಸಾಮಾನ್ಯರು ಪ್ರಧಾನಿ ಕಚೇರಿಯನ್ನು ನೇರವಾಗಿ ಸಂಪರ್ಕಿಸುವ ಬಗೆಯ ಕುರಿತು ಖುದ್ದು ಪ್ರಧಾನಿ ಕಚೇರಿ ಮಾಹಿತಿ ನೀಡಿದ್ದು, ಸಂಪರ್ಕ ಸಾಧನಗಳ ಕುರಿತು ಪಟ್ಟಿ ನೀಡಿದೆ.

ಅದರಂತೆ ಈ ಕೆಳಗಿನ ಮಾರ್ಗಗಳ ಮೂಲಕ ವ್ಯಕ್ತಿ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

1. ಪ್ರಧಾನಮಂತ್ರಿ ಕಾರ್ಯಾಲಯ:
152, ಸೌಥ್ ಬ್ಲಾಕ್
ರೈಸಿನಾ ಹಿಲ್, ನವದೆಹಲಿ-110011

ಫೋನ್ ನಂ-+91-11-23012312, 23018939
ಫ್ಯಾಕ್ಸ್+91-11-23016857

2. ಅಧಿಕೃತ ನಿವಾಸ:
7, ರೇಸ್ ಕೋರ್ಸ್ ರೋಡ್ ನವದೆಹಲಿ-110011

ಫೋನ್ ನಂ-+91-11-23011156, 23016060
ಫ್ಯಾಕ್ಸ್-+91-11-23018939

3. ಪಾರ್ಲಿಮೆಂಟ್ ಹೌಸ್:
ರೂಮ್ ನಂ 10, ಪಾರ್ಲಿಮೆಂಟ್ ಹೌಸ್, ನವದೆಹಲಿ-110011

ಫೋನ್ ನಂ-+91-11-23017660
ಫ್ಯಾಕ್ಸ್-+91-11-23017449

4. ರಾಜ್ಯ ಖಾತೆ ಸಚಿವರು(ಪ್ರಧಾನಿ ಕಾರ್ಯಾಲಯ):
ಡಾ. ಜೀತೆಂದ್ರ ಸಿಂಗ್

ಫೋನ್ ನಂ-+91-11-23010191, 23013719
ಫ್ಯಾಕ್ಸ್-+91-11-23017931

5. ಪ್ರಧಾನ ಕಾರ್ಯದರ್ಶಿ(ಪ್ರಧಾನಿ ಕಾರ್ಯಾಲಯ):

ನೃಪೇಂದ್ರ ಮಿಶ್ರಾ

ಫೋನ್ ನಂ-+91-11-23013040

6. ಕಾರ್ಯದರ್ಶಿ(ಪ್ರಧಾನಿ ಕಾರ್ಯಾಲಯ):

ಆರ್. ರಾಮಾನುಜನಮ್

ಫೋನ್ ನಂ-+91-11-23010838

7. ಖಾಸಗಿ ಕಾರ್ಯದರ್ಶಿ(ಪ್ರಧಾನಿ ಕಾರ್ಯಾಲಯ):

ಸಂಜೀವ್ ಕುಮಾರ್ ಸಿಂಗ್ಲಾ

ಫೋನ್ ನಂ-+91-11-23012312

8. ಖಾಸಗಿ ಕಾರ್ಯದರ್ಶಿ(ಪ್ರಧಾನಿ ಕಾರ್ಯಾಲಯ)

ರಾಜೀವ್ ತೊಪ್ನೋ

 ಫೋನ್ ನಂ-+91-11-23012312

9. ಸಂವಹನ ಸಲಹೆಗಾರ(ಪ್ರಧಾನಿ ಕಾರ್ಯಾಲಯ):

ಫೋನ್ ನಂ-+91-11-23012815

Follow Us:
Download App:
  • android
  • ios