ಮುಂಬೈ :  ಇಶಾ ಅಂಬಾನಿ ಹಾಗೂ ಆನಂದ್ ಪಿರಮಾಳ್ ವಿವಾಹಕ್ಕೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ.  ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿಯ ಅದ್ದೂರಿ ವಿವಾಹಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ. 

ಡಿಸೆಂಬರ್ 12 ರಂದು ಇಶಾ ಹಾಗೂ ಆನಂದ್ ಸಪ್ತಪದಿ ತುಳಿಯಲಿದ್ದು  ಡಿಸೆಂಬರ್ 8 ರಿಂದಲೇ ವಿವಾಹ ಪೂರ್ವ ಸಮಾರಂಭಗಳು ನಡೆಯುತ್ತವೆ. ಮುಂಬೈ ನಿವಾಸದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಲಿವೆ. 

ರಾಜಸ್ಥಾನಿ ಸಂಪ್ರದಾಯದಂತೆ ವಿವಾಹದ ಕೆಲ ಸಂಪ್ರದಾಯಗಳು ನಡೆಯಲಿವೆ.  ಉದಯ್ ಪುರದ ಒಬೆರಾಯ್  ಉದಯ್ ವಿಲಾಸದಲ್ಲಿ ಇಶಾ ಅಂಬಾನಿ ಹಾಗೂ ಆನಂದ್ ಪಿರಮಾಳ್ ವಿವಾಹ  ಸಮಾರಂಭ ನಡೆಯಲಿವೆ. 

ಈಗಾಗಲೇ ವಿವಾಹ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಇನ್ನು ಉದಯ್ ಪುರದಲ್ಲಿ ಸಮಾರಂಭದ ಹಿನ್ನೆಲೆಯಲ್ಲಿ 10  ಹೋಟೆಲ್ ಗಳನ್ನು ತಮ್ಮ ಹೈ ಪ್ರೊಫೈಲ್ ಗೆಸ್ಟ್ ಗಳಿಗಾಗಿ ಬುಕ್ ಮಾಡಿದ್ದಾರೆ.  ಲೀಲಾ ಪ್ಯಾಲೇಸ್ ಸೇರಿದಂತೆ ವಿವಿಧ ಹೋಟೆಲ್ ಗಳನ್ನು ಬುಕ್ ಮಾಡಲಾಗಿದೆ.