ರುದ್ರಪ್ಪ ಆಸಂಗಿ, ಕನ್ನಡಪ್ರಭ

ವಿಜಯಪುರ[ಮೇ.11]: ಸೂರು ಇಲ್ಲದೇ ಬೀದಿ ಬದಿ ಗುಡಿ ಗುಂಡಾರ ದಲ್ಲಿ ವಾಸ ಮಾಡುವ ನಿರ್ಗತಿಕರಿಗಾಗಿ ಕಡಿಮೆ ಹಣದಲ್ಲಿ ಪುಟ್ಟ ಮನೆ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಅದು, ನೀವು ಎಲ್ಲಿರ ಬೇಕು ಎಂದು ಬಯಸುತ್ತಿರೋ ಅಲ್ಲಿಗೆ ಅದನ್ನು ಸುಲಭವಾಗಿ ತಳ್ಳಿಕೊಂಡು ಹೋಗ ಬಹುದು. ಇಂತಹ ಮನೆ ನಿರ್ಮಿಸಿ ಕಡುಬಡ ವರಿಗೆ ಹಂಚುವ  ಕೆಲಸ ವಿಜಯಪುರದಲ್ಲಿ ನಡೆಯುತ್ತಿದ್ದು, ಅದುವೇ ಟೈನಿ ಹೌಸ್ ಆನ್ ವ್ಹೀಲ್ (ಗಾಲಿ ಮೇಲೆ ಪುಟ್ಟ ಮನೆ).

ವ್ಹೀಲ್ (ಗಾಲಿ ಮೇಲೆ ಪುಟ್ಟ ಮನೆ). ವಿಜಯಪುರದ ಶರಣ ಪಡೆ ಲಿಂಗಾಯತ ಜಾಗರಣ ವೇದಿಕೆ ನಿರ್ಗತಿಕರಿಗೆ ಸೂರು ಒದಗಿಸಲು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ವಿಜಯಪುರದ ಮದ್ದಿನಖಣಿ ಬಡಾವಣೆಯ ನಿವಾಸಿ ಕಲ್ಲಪ್ಪ ಕಡೇಚೂರ ಅವರು ಬಡ, ನಿರ್ಗತಿಕರಿಗೆ ಕಡಿಮೆ ದರದಲ್ಲಿ ಸೂರು ಒದಗಿಸಲು ಗಾಲಿ ಮೇಲೆ ಮನೆ ವಿತರಿಸುವ ಈ ವಿನೂತನ ಯೋಜನೆಯನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ. ಹಗುರವಾದ ತಗಡಿ(ಪತ್ರಾಸ)ನಿಂದ ನಿರ್ಮಿ ಸಿದ ಈ ಪುಟ್ಟ ಮನೆಗೆ ನೆಲಕ್ಕೆ ಹೊಂದಿಕೊಂಡಂತೆ ಕೆಳ ಬದಿಯಲ್ಲಿ 10 ಇಂಚು ಹೊಂದಿದ 2 ಗಾಲಿಯನ್ನು ಅಳವಡಿಸಲಾಗಿದೆ. ಈ ಮನೆ ಎತ್ತರ 15 ಅಡಿ.

ಇದು ಎಲ್ಲರಿಗೂ ಸಿಗುವ ಮನೆಯಲ್ಲ. ಸೂರು ಇಲ್ಲದೇ ಬೀದಿ ಬದಿ ಗುಡಿ ಗುಂಡಾರದಲ್ಲಿ ವಾಸ ಮಾಡುವ ನಿರ್ಗತಿಕರು ಇಂತಹ ಮನೆ ಪಡೆಯಬಹುದಾಗಿದೆ. ಈ ಮನೆ ಪಡೆಯಲು ಆಧಾರ ಕಾರ್ಡ್, ರೇಶನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್ ಬುಕ್, ಪಾನ್ ಕಾರ್ಡ್ ಯಾವುದೂ ಬೇಕಿಲ್ಲ. ‘ಗಾಲಿ ಮೇಲೆ ಮನೆಗೆ’ ಅರ್ಜಿ ಹಾಕಿಕೊಂಡರೆ ಸಾಕು. ಅವರು ನಿರ್ಗತಿಕರು ಇರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಮನೆ ಕೊಡುತ್ತಾರೆ.

ಏನೇನಿದೆ ಮನೆಯಲ್ಲಿ?:

ಒಂದು ಮನೆ ನಿರ್ಮಾಣಕ್ಕೆ 20 ತಗಡು ಬಳಸಲಾಗಿದೆ. ಈ ಪೈಕಿ 6 ಅಡಿ 10 ತಗಡು, 5.5 ಅಡಿಯ 10 ತಗಡು ಅಳವಡಿಸಲಾಗಿದೆ. ಮನೆಯ ಒಳ ಬದಿ 6-8 ಅಡಿ ಅಳತೆಯ ಪ್ಲೈವುಡ್ ಹಾಸು ಇದೆ. 5.5 ಅಡಿ ಫೋಲ್ಡೇಬಲ್ ಬೆಡ್ ಕಂ ಕಾಟು ಸೌಲಭ್ಯವಿದೆ. ಮನೆಗೆ ಬಾಗಿಲು, ಕಿಟಕಿ ಅಳವಡಿಸಲಾಗಿದೆ. ಬಾಗಿಲ ಮೇಲ್ಭಾಗದಲ್ಲಿ ಒಳಬದಿಯಲ್ಲಿ ಅಟ್ಟ ಮಾಡಲಾಗಿದೆ. ಈ ಅಟ್ಟದಲ್ಲಿ ಸಾಮಗ್ರಿಗಳನ್ನು ಇಡಬಹುದು. ಈ ಮನೆಯಲ್ಲಿ ಒಬ್ಬರು ಆರಾಮವಾಗಿ ವಾಸಿಸಬಹುದಾಗಿದೆ. ಮಳೆಗೆ ಮನೆ ಸೋರದಂತೆ ಇನ್ಸುಲೇಟೆಡ್ ತಗಡು ಅಳವಡಿಸಲಾಗಿದೆ. ಹೀಗಾಗಿ ಈ ಮನೆಯಲ್ಲಿ ವಾಸಿಸುವವರಿಗೆ ಮಳೆ ಭೀತಿಯಿಲ್ಲ. ಅಡುಗೆ ಮಾಡಿಕೊಳ್ಳಲು ಅವಕಾಶವಿದೆ. ಈ ಮನೆಯ ಮುಂಭಾಗದಲ್ಲಿ ಟ್ರ್ಯಾಕ್ಟರ್ ಟ್ರಾಲಿ ರೂಪದಲ್ಲಿ ಹುಕ್ ಮಾಡಲಾಗಿದೆ. ಈ ಮನೆ ಕೆಳಬದಿಯಲ್ಲಿ ೨ ಗಾಲಿ ಅಳವಡಿಸಲಾಗಿದೆ. ಈ ಮನೆಯನ್ನು ಮತ್ತೊಂದು ಸ್ಥಳಕ್ಕೆ ಸಲೀಸಾಗಿ ಸಾಗಿಸಬಹುದಾಗಿದೆ.

ದುಡ್ಡು ಇಲ್ಲದ ನಿರ್ಗತಿಕರಿಗೆ ಉಚಿತ ಮನೆ: ಇಂತಹ ಒಂದು ಮನೆ ನಿರ್ಮಿಸಲು ₹15 ರಿಂದ ₹20 ಸಾವಿರ ವೆಚ್ಚ ತಗಲುತ್ತದೆ. ಆದರೆ ಮನೆ ಪಡೆಯುವವರಿಗೆ ಉಚಿತ ಮನೆ ಎಂಬ ಭಾವನೆ ಬರಬಾರದು ಎಂಬ ಉದ್ದೇಶದಿಂದ ₹5 ಸಾವಿರ ಪಡೆಯುತ್ತಿದೆ. ಹಣ ನೀಡಿ ಮನೆ ಪಡೆದರೆ ಅದನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಎಂಬುವುದು ವೇದಿಕೆಯ ಇಂಗಿತ. ದುಡ್ಡು ಇರದಿದ್ದರೂ ಉಚಿತವಾಗಿ ಮನೆ ವಿತರಿಸಲು ವೇದಿಕೆ ಮುಂದಾಗಿ