ಅತ್ಯಾಚಾರ ಆರೋಪದಡಿಯಲ್ಲಿ ಜೈಲು ಸೇರಿರುವ ರೇಪಿಸ್ಟ್ ಬಾಬಾರವರ ಹರ್ಯಾಣದಲ್ಲಿರುವ ಸಿರ್ಸಾ ನಿವಾಸದ ಮೇಲೆ 100 ಜನ ಅರೆಸೈನಿಕ ಪಡೆಗಳ ಜೊತೆ ಪೊಲೀಸ್ ಅಧಿಕಾರಿಗಳು ಜೊತೆ ದಾಳಿ ಮಾಡಿದ್ದು, ಬೃಹತ್ ಪ್ರಮಾಣದ ಪ್ಲಾಸ್ಟಿಕ್ ಹಣ, ನಿಷೇಧಿತ ಹಣ, ಹಾರ್ಡ್ ಡಿಸ್ಕ್ ಮತ್ತು ಕಂಪ್ಯೂಟರ್’ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿರ್ಸಾ, ಹರ್ಯಾಣ (ಸೆ.008): ಅತ್ಯಾಚಾರ ಆರೋಪದಡಿಯಲ್ಲಿ ಜೈಲು ಸೇರಿರುವ ರೇಪಿಸ್ಟ್ ಬಾಬಾರವರ ಹರ್ಯಾಣದಲ್ಲಿರುವ ಸಿರ್ಸಾ ನಿವಾಸದ ಮೇಲೆ 100 ಜನ ಅರೆಸೈನಿಕ ಪಡೆಗಳ ಜೊತೆ ಪೊಲೀಸ್ ಅಧಿಕಾರಿಗಳು ಜೊತೆ ದಾಳಿ ಮಾಡಿದ್ದು, ಬೃಹತ್ ಪ್ರಮಾಣದ ಪ್ಲಾಸ್ಟಿಕ್ ಹಣ, ನಿಷೇಧಿತ ಹಣ, ಹಾರ್ಡ್ ಡಿಸ್ಕ್ ಮತ್ತು ಕಂಪ್ಯೂಟರ್’ಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಮಾರು 800 ಎಕರೆ ವಿಸ್ತಾರವಾಗಿರುವ ಡೇರಾ ಸಚ್ಚಾ ಸೌಧ ಪ್ರದೇಶದಲ್ಲಿ ಬೆಳಿಗ್ಗೆಯಿಂದ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಾಂಬ್ ನಿಗ್ರಹ ದಳ, ಕಮಾಂಡೋಗಳು, ಆಯಂಬುಲೆನ್ಸ್’ಗಳು, ಅಗ್ನಿಶಾಮಕ ದಳದ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.
ಡೇರಾ ಪ್ರದೇಶದ ಆವರಣವು 800 ಎಕರೆ ವಿಸ್ತೀರ್ಣ ಹೊಂದಿರುವ ಬೃಹತ್ ಪ್ರದೇಶವಾಗಿದ್ದು, ಕಾರ್ಯಾಚರಣೆಯಯ ಇಡೀ ಪ್ರಕ್ರಿಯೆ ಮುಗಿಸಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಪೊಲೀಸ್ ಮುಖ್ಯಸ್ಥ ಬಿಎಸ್ ಸಂಧು ಹೇಳಿದ್ದಾರೆ.
