ನಸೀಬ್ ಕೌರ್ ಜೈಲಿನಲ್ಲಿ ರಾಮ್ ರಹೀಂ ಜೊತೆ 20 ನಿಮಿಷ ಮಾತುಕತೆ ನಡೆಸಿದ್ದಾಳೆ.

ರೋಹ್ತಕ್(ಸೆ.15): ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ಮೊದಲ ಬಾರಿಗೆ ಆತನ ತಾಯಿ ನಸೀಬ್ ಕೌರ್, ಆತನನ್ನು ಜೈಲಿನಲ್ಲಿ ಭೇಟಿ ಮಾಡಿದ್ದಾಳೆ.

ನಸೀಬ್ ಕೌರ್ ಜೈಲಿನಲ್ಲಿ ರಾಮ್ ರಹೀಂ ಜೊತೆ 20 ನಿಮಿಷ ಮಾತುಕತೆ ನಡೆಸಿದ್ದಾಳೆ. ನಸೀಬ್ ಜೊತೆ ರಾಮ್ ರಹೀಂನ ಕುಟುಂಬದ ಬೇರೆ ಯಾವ ಸದಸ್ಯರೂ ಇರಲಿಲ್ಲ. ಚಾಲಕ ಇಕ್ಬಾಲ್ ಮಾತ್ರ ನಸೀಬ್ ಕೌರ್‌ಳ ಜೊತೆ ಬಂದಿದ್ದ. ಡೇರಾದಲ್ಲಿ ಈಗ ಏನು ಆಗುತ್ತಿದೆ ಎಂದು ತಾಯಿಯನ್ನು ರಾಮ್ ರಹೀಂ ಕೇಳಿದ್ದು. ಅದಕ್ಕೆ ಆಕೆ ಎಲ್ಲವೂ ಚೆನ್ನಾಗಿದೆ ಎಂದು ಉತ್ತರಿಸಿದ್ದಾಳೆ ಎಂದು ವರದಿಗಳು ತಿಳಿಸಿವೆ.