ಶ್ರೀನಗರ[ಏ.14]: ಬಿಜೆಪಿಯ ‘ಮೈ ಭೀ ಚೌಕಿದಾರ್‌’ ಅಭಿಯಾನ ಭಾರೀ ಪ್ರಚಾರ ಗಿಟ್ಟಿಸಿದ ಬೆನ್ನಲ್ಲೇ, ಜಮ್ಮು-ಕಾಶ್ಮೀರದ ಶ್ರೀನಗರದ ಉಪ ಮೇಯರ್‌ ಶೇಖ್‌ ಮೊಹಮ್ಮದ್‌ ಇಮ್ರಾನ್‌ ಅವರು, ಮುಸ್ಲಿಂ ಯುವಕರು ಕೂಡಾ ತಮ್ಮ ಹೆಸರಿನ ಹಿಂದೆ ಮುಜಾಹಿದ್‌(ಜಿಹಾದ್‌) ಎಂಬ ಪದ ಸೇರಿಸಿಕೊಳ್ಳುವಂತೆ ಹಾಗೂ ಕೋಮು ದ್ವೇಷದ ಮೂಲಕ ಚುನಾವಣೆ ಎದುರಿಸುತ್ತಿರುವ ಪಕ್ಷಗಳನ್ನು ಸೋಲಿಸುವಂತೆ ಕರೆ ನೀಡಿದ್ದಾರೆ.

ಈ ಬಗ್ಗೆ ಕರೆ ಕೊಟ್ಟಿರುವ ಇಮ್ರಾನ್‌ ಅವರು, ‘ಜಿಹಾದ್‌(ಪವಿತ್ರ ಯುದ್ಧ) ಎಂದರೆ, ಶತ್ರುಗಳ ವಿರುದ್ಧದ ಧಾರ್ಮಿಕ ಯುದ್ಧ ಅಥವಾ ದುಷ್ಟಶಕ್ತಿಗಳ ವಿರುದ್ಧದ ಹೋರಾಟವಾಗಿದೆ. ಹಾಗಾಗಿ, ಪ್ರತಿಯೊಬ್ಬ ಮುಸ್ಲಿಮರು ತಮ್ಮ ಹೆಸರಿನ ಹಿಂದೆ ಮುಜಾಹಿದ್‌ ಎಂಬುದನ್ನು ಸೇರಿಸಿಕೊಳ್ಳಬೇಕು ಎಂದಿದ್ದಾರೆ.

ಸದ್ಯ ಈ ವಿಚಾರ ಭಾರೀ ವಿವಾದ ಸೃಷ್ಟಿಸಿದ್ದು, ಉಪ ಮೇಯರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28