ಪ್ರತಿ ತಿಂಗಳು 2000 ರು.ನಂತೆ ಈವರೆಗೆ ಕೊಡಲಾಗುತ್ತಿದ್ದ ನಿಯೋಜನೆ ಭತ್ಯೆಯನ್ನು 4500ರು.ಗೆ ಹೆಚ್ಚಿಸಿದೆ. 7ನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಈ ಕ್ರಮ ಜರುಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ನವದೆಹಲಿ(ನ.28): ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳ ನಿಯೋಜನೆ ಭತ್ಯೆಯನ್ನು (ಡೆಪ್ಯುಟೇಶನ್ ಅಲೋಯೆನ್ಸ್) ದುಪ್ಪಟ್ಟು ಮಾಡಿ ಆದೇಶ ಹೊರಡಿಸಿದೆ.

ಪ್ರತಿ ತಿಂಗಳು 2000 ರು.ನಂತೆ ಈವರೆಗೆ ಕೊಡಲಾಗುತ್ತಿದ್ದ ನಿಯೋಜನೆ ಭತ್ಯೆಯನ್ನು 4500ರು.ಗೆ ಹೆಚ್ಚಿಸಿದೆ. 7ನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಈ ಕ್ರಮ ಜರುಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಲಿ ನೌಕರಿ ಮಾಡುತ್ತಿದ್ದ ಊರಿನಲ್ಲೇ ಬೇರೆಡೆ ನಿಯೋಜನೆಯಾಗಿದ್ದರೆ ಮೂಲವೇತನದ ಶೇ.5ರಷ್ಟು ನಿಯೋಜನೆ ಭತ್ಯೆ ನೀಡಲಾಗುತ್ತದೆ.

ಆದರೆ ಗರಿಷ್ಠ ಮಿತಿ 4500 ರು. ಇರಲಿದೆ. ಇದೇ ವೇಳೆ, ಬೇರೆ ಊರಿಗೆ ನಿಯೋಜನೆ ಮೇರೆಗೆ ತೆರಳಿದರೆ ಮೂಲ ವೇತನದ ಶೇ.10ರಷ್ಟು ನಿಯೋಜನೆ ಭತ್ಯೆ ನೀಡಲಾಗುತ್ತದೆ. ಆದರೆ ಇದರ ಮಿತಿ ಗರಿಷ್ಠ 9000 ರು. ಇರಲಿದೆ.