ಸ್ಮಾರ್ಟ್‌ಫೋನ್‌ಗಾಗಿ ತಂದೆಯನ್ನೇ ಕೊಂದ ಮಗಗುದ್ದಲಿಯಿಂದ ಹೊಡೆದು ತಂದೆ ಕೊಂದ ಪಾಪಿಹಣ ಕೊಡಲು ನಿರಾಕರಿಸಿದ್ದಕ್ಕೆ ಕೊಲೆ

ಕಾನ್ಪುರ್(ಜೂ.25): ಸ್ಮಾರ್ಟ್‌ಫೋನ್‌ ಕೊಳ್ಳಲು ಹಣ ಕೊಡದ ತಂದೆಯನ್ನು ಪಾಪಿ ಮಗನೋರ್ವ ಕೊಲೆ ಮಾಡಿರುವ ದಾರುಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಸ್ಮಾರ್ಟ್‌ಫೋನ್‌ ಬೇಕೆಂದು ಹಠ ಹಿಡಿದ 19 ವರ್ಷದ ಆನಂದ್ ಕಿಶೋರ್ ತಿವಾರಿ, ಅದನ್ನು ಕೊಡಿಸಲೊಪ್ಪದ ತನ್ನ ತಂದೆ 60 ವರ್ಷದ ಕೃಷ್ಣ ಕುಮಾರ್ ಎಂಬುವರರ ಗುದ್ದಲಿ ತೆಗೆದುಕೊಂಡು ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸಾವ್ರವಾಗಿ ಕೃಷ್ಣ ಕುಮಾರ್ ಮೃತಪಟ್ಟಿದ್ದಾರೆ. 

ಘಟನೆ ವೇಳೆ ಕೃಷ್ಣ ಕುಮಾರ್ ಅವರು ಕಿರುಚಾಡಿದ್ದರಿಂದ ನೆರೆಹೊರೆಯವರು ಅಲ್ಲಿಗೆ ಬಂದು ತಪ್ಪಿಸಿಕೊಳ್ಳಲು ಮುಂದಾಗುತ್ತಿದ್ದ ಆನಂದ್‌ನನ್ನು ಬಂಧಿಸಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆನಂದ್ ಕೃಷ್ಣ ಕುಮಾರ್ ಅವರ ಮೂರನೇ ಮಗ ಎನ್ನಲಾಗಿದ್ದು, ಆಗಾಗ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಲೇ ಇರುತ್ತಿತ್ತು ಎಂದು ನೆರೆಹೊರೆಯವರು ತಿಳಿಸಿದ್ದಾರೆ. 

ಕೆಲಸ ಕಾರ್ಯವಿಲ್ಲದೆ ಬೇಕಾಬಿಟ್ಟಿ ತಿರುಗಾಡಿಕೊಂಡಿದ್ದ ಆನಂದ್ ದುಡ್ಡಿಗಾಗಿ ಪದೇ ಪದೇ ತಂದೆಯನ್ನು ಪೀಡಿಸುತ್ತಿದ್ದ. ಕಳೆದ ಶನಿವಾರ ರಾತ್ರಿ ಸ್ಮಾರ್ಟ್‌ಫೋನ್‌ ಬೇಕೆಂದು ಹಠ ಹಿಡಿದು, ಹಣ ಕೊಡಲು ನಿರಾಕರಿಸಿದ ತಂದೆಯನ್ನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.