ಸರ್ಕಾರದ ಕ್ರಮವು ಊಹಿಸಲಸಾಧ್ಯವಾದ ರೀತಿಯಲ್ಲಿ ಆರ್ಥಿಕತೆಗೆ ನಷ್ಟವನ್ನುಂಟುಮಾಡಿದೆ. ಸಾಮಾನ್ಯ ಜನತೆ ವಿಶೇಷವಾಗಿ ಮೀನುಗಾರರು, ಕಲಾವಿದರು, ದಿನಗೂಲಿ ಕಾರ್ಮಿಕರು ಹಾಗೂ ರೈತರು ನರಳುತ್ತಿದ್ದಾರೆ, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಲಹಾಬಾದ್ (ನ.21): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಎಲ್ಲಾ ಅಧಿಕಾರಗಳು ಒಬ್ಬ ವ್ಯಕ್ತಿ ಬಳಿ ಇರುವುದರ ನೇರ ಪರಿಣಾಮವೇ ವಿಚಾರ-ರಹಿತ ಅಪಮೌಲ್ಯೀಕರಣ ಕ್ರಮವಾಗಿದೆ ಎಂದು ಹೇಳಿದ್ದಾರೆ.
ಭಾರತದ ಇತಿಹಾಸದಲ್ಲೇ ಪ್ರಮುಖವಾದ ಆರ್ಥಿಕ ನಿರ್ಧಾರವೆಂದು ಬಣ್ಣಿಸಲಾಗುತ್ತಿರುವಕ್ರಮವನ್ನು ಮೂರು-ನಾಲ್ಕು ಮಂದಿಯೊಂದಿಗೆ ಮಾತ್ರವೇ ಚರ್ಚಿಸಲಾಗಿದೆ. ಇದು ಜನರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಯೋಚಿಸಲಾಗಿದೆಯೇ? ಎಲ್ಲಾ ಅಧಿಕಾರಗಳು ಒಬ್ಬ ವ್ಯಕ್ತಿ ಬಳಿ ಮಾತ್ರ ಇರುವುದರಿಂದ, ಯಾವುದೇ ಯೋಚನೆ ಮಾಡದೇ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸರ್ಕಾರದ ಕ್ರಮವು ಊಹಿಸಲಸಾಧ್ಯವಾದ ರೀತಿಯಲ್ಲಿ ಆರ್ಥಿಕತೆಗೆ ನಷ್ಟವನ್ನುಂಟುಮಾಡಿದೆ. ಸಾಮಾನ್ಯ ಜನತೆ ವಿಶೇಷವಾಗಿ ಮೀನುಗಾರರು, ಕಲಾವಿದರು, ದಿನಗೂಲಿ ಕಾರ್ಮಿಕರು ಹಾಗೂ ರೈತರು ನರಳುತ್ತಿದ್ದಾರೆ, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಶ್ರೀಮಂತರು ಯಾವುದೇ ಸಮಸ್ಯೆಯಿಲ್ಲದೇ ಹಾಯಾಗಿದ್ದಾರೆ, ಆದರೆ ಬಡಜನರು ಸರತಿ ಸಾಲುಗಳಲ್ಲಿ ನಿಂತು ನರಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ