ಪ್ರತಿಷ್ಠಿತ ಸ್ಟಾರ್ ಹೊಟೇಲ್ ನಲ್ಲಿ ಕಂತೆ ಕಂತೆ ಹಳೆ ನೋಟು!

Demonetised currency seized from a 5-star hotel
Highlights

ನಾಣ್ಯ ಅಮಾನ್ಯೀಕರಣದ ಒಂದುವರೆ ವರ್ಷದ ಬಳಿಕವೂ ದೇಶದ ಹಲವು ಭಾಗಗಳಲ್ಲಿ ಇನ್ನೂ ಹಳೆಯ 500 ಮತ್ತು 1000 ರೂ. ಮುಖ ಬೆಲೆಯ ನೋಟುಗಳು ಸಿಗುತ್ತಲೇ ಇವೆ. ಮುಂಬೈನ 5 ಸ್ಟಾರ್ ಹೊಟೇಲ್ ವೊಂದರಲ್ಲಿ ಸುಮಾರು 4.93 ಕೋಟಿ ರೂ. ಬೆಲೆಯ ಹಳೆಯ ಕರೆನ್ಸಿ ನೋಟುಗಳು ಪತ್ತೆಯಾಗಿವೆ.

ಮುಂಬೈ(ಮೇ.25): ನಾಣ್ಯ ಅಮಾನ್ಯೀಕರಣದ ಒಂದುವರೆ ವರ್ಷದ ಬಳಿಕವೂ ದೇಶದ ಹಲವು ಭಾಗಗಳಲ್ಲಿ ಇನ್ನೂ ಹಳೆಯ 500 ಮತ್ತು 1000 ರೂ. ಮುಖ ಬೆಲೆಯ ನೋಟುಗಳು ಸಿಗುತ್ತಲೇ ಇವೆ. ಮುಂಬೈನ 5 ಸ್ಟಾರ್ ಹೊಟೇಲ್ ವೊಂದರಲ್ಲಿ ಸುಮಾರು 4.93 ಕೋಟಿ ರೂ. ಬೆಲೆಯ ಹಳೆಯ ಕರೆನ್ಸಿ ನೋಟುಗಳು ಪತ್ತೆಯಾಗಿವೆ.

ಮುಂಬೈನ ಅತ್ಯಂತ ಪ್ರತಿಷ್ಠಿತ 5 ಸ್ಟಾರ್ ಹೊಟೇಲ್ ನಲ್ಲಿ ಇಷ್ಟು ಅಗಾಧ ಪ್ರಮಾಣದ ಹಳೆಯ ಕರೆನ್ಸಿ ನೋಟುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಹೊಟೇಲ್ ನ ಮೂವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಈ ಹಣದ ಮೂಲ ಇನ್ನೂ ಪತ್ತೆಯಾಗಿಲ್ಲ, ಆದರೆ ಬಂಧಿತರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

 

;

ಪ್ರಕರಣಕ್ಕೆ ಸಂಬಧಿಸಿದಂತೆ ಮತ್ತಷ್ಟು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿಲ್ಲ. ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ಹಗರಣ ಎಂದು ಕಂಡು ಬರುತ್ತಿದ್ದು, 5 ಸ್ಟಾರ್ ಹೊಟೇಲ್ ನ ಮತ್ತಷ್ಟು ಸಿಬ್ಬಂದಿಯನ್ನ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

loader