ನೋಟು ನಿಷೇಧ ನೀತಿಯು 3 ರಿಂದ 5 ಲಕ್ಷ ಕೋಟಿ ಮೊತ್ತದ ಹಗರಣವನ್ನು ಬಹಿರಂಗಗೊಳಿಸಲಿದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.
ನವದೆಹಲಿ (ಡಿ.17): ನೋಟು ನಿಷೇಧ ನೀತಿಯು 3 ರಿಂದ 5 ಲಕ್ಷ ಕೋಟಿ ಮೊತ್ತದ ಹಗರಣವನ್ನು ಬಹಿರಂಗಗೊಳಿಸಲಿದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಒಂದೇ ಸರಣಿಯ ಎರಡು ಮುಖಬೆಲೆಯ ನೋಟುಗಳನ್ನು ಆರ್ ಬಿಐ ಅಥವಾ ಹಿಂದಿನ ಸರ್ಕಾರ ಬಿಡುಗಡೆ ಮಾಡಿದೆ. ಇದು ಆರ್ಥಿಕತೆಗೆ ಕಪ್ಪುಚುಕ್ಕಿ ಎಂದು ರಾಮ್ ದೇವ್ ಆರೋಪಿಸಿದ್ದಾರೆ.
ಆರ್ ಬಿಐ ಕೆಳಗೆ ಕೆಲಸ ಮಾಡುವ ಕೆಲವು ಮಂದಿಯ ವರ್ತನೆ ಅನುಮಾನಾಸ್ಪದವಾಗಿದೆ. ನಮ್ಮ ವ್ಯವಸ್ಥೆಯ ಬಗ್ಗೆಯೇ ಪ್ರಶ್ನೆ ಎತ್ತುವ ಸ್ಥಿತಿ ಬಂದಿರುವುದು ದೌರ್ಭಾಗ್ಯ. ಒಂದೇ ಸರಣಿಯ ಎರಡು ಮುಖಬೆಲೆಯ ನೋಟುಗಳನ್ನು ಸರ್ಕಾರ ಅಥವಾ
ಆರ್ ಬಿಐ ಮುದ್ರಿಸಿದ್ದರೆ ಇದರ ಬಗ್ಗೆ ಚರ್ಚೆಯಾಗಬೇಕು. ಆರ್ಥಿಕತೆಗೆ ಇದೊಂದು ಕಪ್ಪುಚುಕ್ಕೆಯಾಗಿದೆ. ಇದು 3-5 ಲಕ್ಷ ಕೋಟಿ ಹಗರಣವನ್ನು ಬಹಿರಂಗಗೊಳಿಸಲಿದೆ ಎಂದು ಹೇಳಿದ್ದಾರೆ.
