Asianet Suvarna News Asianet Suvarna News

ನೋಟು ಅಪನಗದೀಕರಣಕ್ಕೆ 1 ವರ್ಷ: ವೈಯುಕ್ತಿಕ ಹಣಕಾಸು ವ್ಯವಹಾರದ ಮೇಲೆ ನೋಟು ನಿಷೇಧದ ಪರಿಣಾಮ

ಕಳೆದ ವರ್ಷ ಕೇಂದ್ರ ಸರ್ಕಾರವು ಕೈಗೊಂಡ ನೋಟು ಮಾನ್ಯ ಕ್ರಮವು ದೇಶದಾದ್ಯಂತ ಸಂಚಲನವನ್ನು ಮೂಡಿಸಿತ್ತು, ಅಲ್ಲದೇ ಜನರ ಮುಂದೆ ಬಹಳ ಸವಾಲುಗಳನ್ನು ಸೃಷ್ಟಿಸಿತ್ತು. ರೂ. 500 ಮತ್ತು ರೂ.1000 ನೋಟುಗಳನ್ನು ನಿಷೇಧ ಕ್ರಮವು ಬಹಳ ಮಂದಿಯ ಹಣಕಾಸು ವ್ಯವಹಾರಗಳಿಗೆ ಭಾರೀ ತೊಂದರೆಯನ್ನುಂಟುಮಾಡಿತು. ನಗದು ವ್ಯವಹಾರವಾಗಿರಲಿ, ಹೂಡಿಕೆ ಅಥವಾ  ಸಾಲ ಪಾವತಿಯಾಗಿರಲಿ, ನೋಟು ಅಮಾನ್ಯ ಕ್ರಮದ ಬಳಿಕದ ಒಂದು ವರ್ಷದ ಅವಧಿಯಲ್ಲಿ ಜನರ ವೈಯುಕ್ತಿಕ ಹಣಕಾಸು ನಿರ್ವಹಣೆಯಲ್ಲಿ ಬಹಳಾರು ಬದಲಾವಣೆಗಳಾಗಿವೆ.

Demonetisation First Anniversary How It Has Impacted Your Personal Finance

ಕಳೆದ ವರ್ಷ ಕೇಂದ್ರ ಸರ್ಕಾರವು ಕೈಗೊಂಡ ನೋಟು ಮಾನ್ಯ ಕ್ರಮವು ದೇಶದಾದ್ಯಂತ ಸಂಚಲನವನ್ನು ಮೂಡಿಸಿತ್ತು, ಅಲ್ಲದೇ ಜನರ ಮುಂದೆ ಬಹಳ ಸವಾಲುಗಳನ್ನು ಸೃಷ್ಟಿಸಿತ್ತು. ರೂ. 500 ಮತ್ತು ರೂ.1000 ನೋಟುಗಳನ್ನು ನಿಷೇಧ ಕ್ರಮವು ಬಹಳ ಮಂದಿಯ ಹಣಕಾಸು ವ್ಯವಹಾರಗಳಿಗೆ ಭಾರೀ ತೊಂದರೆಯನ್ನುಂಟುಮಾಡಿತು. ನಗದು ವ್ಯವಹಾರವಾಗಿರಲಿ, ಹೂಡಿಕೆ ಅಥವಾ  ಸಾಲ ಪಾವತಿಯಾಗಿರಲಿ, ನೋಟು ಅಮಾನ್ಯ ಕ್ರಮದ ಬಳಿಕದ ಒಂದು ವರ್ಷದ ಅವಧಿಯಲ್ಲಿ ಜನರ ವೈಯುಕ್ತಿಕ ಹಣಕಾಸು ನಿರ್ವಹಣೆಯಲ್ಲಿ ಬಹಳಾರು ಬದಲಾವಣೆಗಳಾಗಿವೆ.

ನೋಟು ಅಮಾನ್ಯ ಕ್ರಮವು ಕಳೆದ ಒಂದು ವರ್ಷ ಅವಧಿಯಲ್ಲಿ  ಆರ್ಥಿಕತೆ ಹಾಗೂ ವೈಯುಕ್ತಿಕ ಹಣಕಾಸು ವ್ಯವಹಾರದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ನಾವು ನೋಡೋಣ:

ನಗದು ವ್ಯವಹಾರದಿಂದ ಡಿಜಿಟಲ್ ವ್ಯವಹಾರದೆಡೆಗೆ ಹೆಜ್ಜೆ:

ನೋಟು ಅಮಾನ್ಯ ಕ್ರಮದ ಬಳಿಕ ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸಲು ಸರ್ಕಾರವು ಹಲವು ಯೋಜನೆಗಳನ್ನು ಘೋಷಿಸಿತು. ಡಿಜಿಟಲ್ ವ್ಯವಹಾರವನ್ನು ಜನಪ್ರಿಯಗೊಳಿಸಲು ವರ್ತಕರು ವಿವಿಧ ರೀತಿಯ ಆಫರ್ ಹಾಗೂ ರಿಯಾಯಿತಿಗಳನ್ನು ಪ್ರಕಟಿಸಿದರು. ಬ್ಯಾಂಕು ಹಾಗೂ ಇನ್ನಿತರ ಕಂಪನಿಗಳು ಡಿಜಿಟಲ್ ವ್ಯವಹಾರಗಳನ್ನು ನಡೆಸಲು ಅಪ್ಲಿಕೆಶನ್’ಗಳನ್ನು ಆರಂಭಿಸಿದರು. ಆರಂಭದಲ್ಲಿ ಆನ್’ಲೈನ್ ಬ್ಯಾಂಕಿಂಗ್ ಶುಲ್ಕವನ್ನು ಬ್ಯಾಂಕುಗಳು ಕಡಿತಗೊಳಿಸಿದರೂ, ಬಳಿಕದ ದಿನಗಳಲ್ಲಿ ಅದನ್ನು ಪುನಃ ವಿಧಿಸಲಾಯಿತು. ಅದಾಗ್ಯೂ, ನೋಟು ಅಮಾನ್ಯ ಕ್ರಮ ಮುಂಚಿನ ದಿನಗಳಿಗೆ ಹೋಲಿಸಿದಾಗ ಆ ಶುಲ್ಕವು ಕಡಿಮೆಯಾಗಿದೆ.

ಸರ್ಕಾರಿ ಸಂಸ್ಥೆಗಳು, ಸ್ಥಳಿಯಾಡಳಿತ ಸಂಸ್ಥೆಗಳು, ವಿದ್ಯುತ್ ಇಲಾಖೆ ಮತ್ತಿತರ ಬಹುತೇಕ ಸಾರ್ವಜನಿಕ ಸಂಸ್ಥೆಗಳು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಆರಂಭಿಸಿವೆ. ಈ ಮೂಲಕ ಗ್ರಾಹಕರು ತಮ್ಮ ಖರ್ಚಿನ ಲೆಕ್ಕ ಇಡಲು ಸುಲಭವಾಗಿದೆಯಲ್ಲದೇ, ಹಣಕಾಸು ನಿರ್ವಹಣೆ ಕೂಡಾ ಸರಳವಾಗಿದೆ.

ರಿಯಲ್ ಎಸ್ಟೇಟ್ ದರಗಳಲ್ಲಿ ಸ್ಥಿರತೆ:

ನೋಟು ಅಮಾನ್ಯ ಕ್ರಮದ ಮುಂಚೆ ರಿಯಲ್ ಎಸ್ಟೇಟ್’ನಲ್ಲಿ ಕಪ್ಪುಹಣದ ಹೂಡಿಕೆಯಿಂದಾಗಿ ಬೆಲೆಗಳು ಅಸಹಜವಾಗಿ ಏರಿಕೆಯಾಗಿತ್ತು. ಆದುದರಿಂದ ರಿಯಲ್ ಎಸ್ಟೇಟ್ ವಲಯುವು ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿತ್ತು. ನೋಟು ಅಮಾನ್ಯ ಕ್ರಮದ ಬಳಿಕ ಕಪ್ಪುಹಣ ಹೂಡಿಕೆಯು ಕಡಿಮೆಯಾಗಿದ್ದು, ಬೆಲೆಗಳು ಸಹಜ ಸ್ಥಿತಿಗೆ ಮರಳಿವೆ, ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚಾಗಿದೆ.  ಈ ನಡುವೆ ಸರ್ಕಾರ ರೇರಾ ಹಾಗೂ ಬೇನಾಮಿ ವ್ಯವಹಾರ ಕಾಯ್ದೆನ್ನು ಜಾರಿಗೆ ತರುತ್ತಿದ್ದು, ಜನರಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯ ವಿಶ್ವಾಸಾರ್ಹತೆ ಹೆಚ್ಚಿಸಲು ಸಹಕಾರಿಯಾಗಿದೆ.

ಬಡ್ಡಿದರಗಳು ಕೂಡಾ ಕಡಿಮೆಯಾಗಿರುವುದರಿಂದ, ಹಾಗೂ ರಿಯಲ್ ಎಸ್ಟೇಟ್ ವಲಯವನ್ನು ನಿಯಂತ್ರಿಸಲು ರೇರಾ ನಿಯಮಗಳು ಕೂಡಾ ಜಾರಿಗೆ ಬಂದಿರುವುದರಿಂದ  ನಿಮ್ಮ ಕನಸಿನ ಮನೆಯನ್ನು ಕೊಳ್ಳಲು ಈಗ ಸಕಾಲ.

ಸಾಲದ ಮೇಲಿನ ಬಡ್ಡಿ ಕಡಿತ:

ನೋಟು ಅಮಾನ್ಯ ಕ್ರಮದ ಬಳಿಕ ಬ್ಯಾಂಕುಗಳಿಗೆ ನಗದು ಹಣದ ಮಹಾಪೂರವೇ ಹರಿದು ಬಂದ ಪರಿಣಾಮವಾಗಿ ಕಳೆದ ಒಂದು ವರ್ಷದಲ್ಲಿ ವಿವಿಧ ಸಾಲಗಳ ಮೇಲಿನ ಬಡ್ಡಿ ದರಗಳಲ್ಲಿ ಕಡಿತವಾಗಿದೆ. ಹಾಗೂ, ಸುಲಭವಾಗಿ ಸಾಲ ಮಂಜೂರು ಆಗುತ್ತಿದೆ. ಈಗಾಗಲೇ ಸಾಲ ಪಡೆದವರು ಸಾಲ ಮರುಪಾವತಿ ಮಾಡಬಹುದು ಅಥವಾ, ಕಂತುಗಳ ಹೊರೆಯನ್ನು ಕಡಿಮೆಮಾಡಿಕೊಳ್ಳಬಹುದಾಗಿದೆ.

ನಿಖರ ಠೇವಣಿಗಳ ಮೇಲಿನ ಬಡ್ಡಿದರ:

ನೋಟು ಅಮಾನ್ಯ ಕ್ರಮದ ಮುಂಚೆ ನಿಖರ ಠೇವಣಿ ಮೇಲೆ ಶೇ.8ರಷ್ಟಿದ್ದ ಬಡ್ಡಿದರ ಈಗ ಶೇ.6 ಕ್ಕಿಳಿದಿರಿವುದು ಠೇವಣಿದಾರರಿಗೆ ಹಿನ್ನಡೆಯಾಗಿದೆ. ನೀವು ಹೂಡಿಕೆಗೆ ಪರ್ಯಾಯ ರೀತಿಯನ್ನು ನೋಡುತ್ತಿರುವಿರಾದರೆ,  ಮ್ಯೂಚುವಲ್ ಫಂಡ್ಸ್ ಮತ್ತು ಪೋಸ್ಟ್ ಆಫೀಸ್ ಫಿಕ್ಸೆಡ್ ಡಿಪಾಸಿಟ್ ಯೋಜನೆಗಳನ್ನು ಪರಿಗಣಿಸಬಹುದು.

ಮ್ಯೂಚುವಲ್ ಫಂಡ್’ಗಳಲ್ಲಿ ಹೂಡಿಕೆ ಹೆಚ್ಚಳ:

ನೋಟು ಅಮಾನ್ಯ ಕ್ರಮದ ಬಳಿಕ ಹೆಚ್ಚೆಚ್ಚು ಮಂದಿ ಆದಾಯ ತೆರಿಗೆ ಸಲ್ಲಿಸುತ್ತಿದ್ದು, ಸೆಕ್ಷನ್ 80ಸಿ ಅನ್ವಯ ತೆರಿಗೆ ಉಳಿಸಲು ಮ್ಯೂಚುವಲ್ ಫಂಡ್’ಗಳಲ್ಲಿ ಹಣ ಹೂಡಲು ಆರಂಭಿಸಿದ್ದಾರೆ. ಒಳ್ಳೆಯ ಲಾಭಾಂಶ ತರುವ ಹೂಡಿಕೆಯ ವಿಧಾನಗಳನ್ನು ಜನರು ನೋಡುತ್ತಿದ್ದಾರೆ. ನೋಟು ಅಮಾನ್ಯ ಕ್ರಮದಿಂದ ಕೇವಲ ಎಫ್’ಡಿ ಬಡ್ಡಿದರ ಕಡಿತವಾಗಿರುವುದು ಮಾತ್ರವಲ್ಲದೇ, ಚಿನ್ನದಲ್ಲಿ ಹಣ ಹೂಡುವುದರ ಬಗ್ಗೆಯೂ ಜನರ ಆಸಕ್ತಿ ಕಡಿಮೆಯಾಗಿದೆ.  ಆದುದರಿಂದ ಹೆಚ್ಚಿನ ಮಂದಿ ಮ್ಯೂಚುವಲ್ ಫಂಡ್ ಮತ್ತು ಈಕ್ವಿಟಿ ಆಧಾರಿತ ಹೂಡಿಕೆಗಳಲ್ಲಿ ಹಣವನ್ನು ಹೂಡಲು ಆರಂಭಿಸಿದ್ದಾರೆ.

ನೋಟು ಆಮಾನ್ಯ ಕ್ರಮದ ಬಳಿಕ ಜಿಎಸ್ಟಿ ಜಾರಿ ಹಾಗೂ ಇನ್ನಿತರ ಸುಧಾರಣಾ ಕ್ರಮಗಳು ಜಾರಿಗೆ ಬಂದಿರುವುದರಿಂದ ಆರ್ಥಿಕತೆಯು ನಗದು-ರಹಿತ ಆರ್ಥಿಕತೆಯತ್ತ ಮುಖ ಮಾಡಿದೆ.  ಈಗ ಗೋಚರಿಸುತ್ತಿರುವ ನೋಟು ಅಮಾನ್ಯ ಕ್ರಮದ ಪರಿಣಾಮಗಳು ಅಂತಿಮವಲ್ಲ, ಮುಂದಿನ ದಿನಗಳಲ್ಲಿ ಇದರ ಸ್ಪಷ್ಟ ಚಿತ್ರಣ ಸಿಗಲಿದೆ.

Demonetisation First Anniversary How It Has Impacted Your Personal Finance

ಆಧಿಲ್ ಶೆಟ್ಟಿ, ಸಿಇಓ- ಬ್ಯಾಂಕ್ ಬಝಾರ್

[ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು  ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು  ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.]

Follow Us:
Download App:
  • android
  • ios