ನಮ್ಮ ಸರ್ಕಾರವು ಬಡವರ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದು ನೋಟು ಅಮಾನ್ಯವು ದೀರ್ಘಾವಧಿಯಲ್ಲಿ ಬಡವರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿ (ಜ.07): ನಮ್ಮ ಸರ್ಕಾರವು ಬಡವರ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದು ನೋಟು ಅಮಾನ್ಯವು ದೀರ್ಘಾವಧಿಯಲ್ಲಿ ಬಡವರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಪ್ರಧಾನಿ ಈ ಮಾತನ್ನು ಹೇಳಿದ್ದಾರೆ. ಇವರು ಮಾಡಿದ 50 ನಿಮಿಷ ಭಾಷಣದಲ್ಲಿ ಬಡವರ ಸಬಲೀಕರಣಕ್ಕಾಗಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಒತ್ತಿ ಹೇಳಿದ್ದಾರೆ.
ಕಾರ್ಯಕಾರಣಿ ಮುಗಿದ ಬಳಿಕ ಪ್ರಧಾನಿ ಭಾಷಣವನ್ನು ಸಮೀಕರಿಸಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಭಾರತೀಯ ಜನತಾ ಪಕ್ಷ ಬಡವರ ಪರ ಮಾತನಾಡುತ್ತಿಲ್ಲ. ನಮ್ಮ ಪಕ್ಷವು ವೋಟ್ ಬ್ಯಾಂಕ್ ದೃಷ್ಟಿಯಲ್ಲಿ ಬಡವರನ್ನು ನೊಡುವುದಿಲ್ಲ ಎಂದು ಹೇಳಿದ್ದಾರೆ.
