ಕಪ್ಪುಹಣ ಅಕ್ರಮದಲ್ಲಿ ಭಾಗಿಯಾದ ಸಾರ್ವಜನಿಕ ವಲಯದ ಬೇರೆ ಬೇರೆ ಬ್ಯಾಂಕುಗಳ 27 ಹಿರಿಯ ಬ್ಯಾಂಕ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 6 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.
ನವದೆಹಲಿ (ಡಿ.03): ಕಪ್ಪುಹಣ ಅಕ್ರಮದಲ್ಲಿ ಭಾಗಿಯಾದ ಸಾರ್ವಜನಿಕ ವಲಯದ ಬೇರೆ ಬೇರೆ ಬ್ಯಾಂಕುಗಳ 27 ಹಿರಿಯ ಬ್ಯಾಂಕ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 6 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆ ಐಟಿ ದಾಳಿ ಮಾಡಿ ಕೋಟ್ಯಾಂತರ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳ ಮನೆ ಮೇಲೆ ದಾಳಿ ಮಾಡಿ 5.7 ಕೋಟಿ ವಶಪಡಿಸಿಕೊಳ್ಳಲಾಗಿದೆ.
ಆರ್ ಬಿಐ ಸೂಚನೆಗಳನ್ನು ಉಲ್ಲಂಘಿಸಿ ಅಕ್ರಮಗಳಲ್ಲಿ ಭಾಗಿಯಾದ ಬೇರೆ ಬೇರೆ ಬ್ಯಾಂಕುಗಳ 27 ಹಿರಿಯ ಅಧಿಕಾರಿಗಳನ್ನು ಅಮಾನತಿನಲ್ಲಿಡಲಾಗಿದೆ. 6 ಮಂದಿಯನ್ನು ಸೂಕ್ಷ್ಮವಲ್ಲದ ಪ್ರದೇಶಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮಗಳನ್ನು ಸಹಿಸುವುದಿಲ್ಲ. ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರ ಮೇಲೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
