ರಾಯ್‌ಗಢ[ಜ.26]: ಪಿಎನ್‌ಬಿಗೆ 13000 ಕೋಟಿ ರು. ವಂಚಿಸಿರುವ ವಜ್ರೋದ್ಯಮಿ ನೀರವ್ ಮೋದಿ ಒಡೆತನದ ಮಹಾರಾಷ್ಟ್ರದ ಅಲಿಬಾಗ್‌ನಲ್ಲಿರುವ ಬಂಗಲೆಯೊಂದನ್ನು ಕೆಡವಲು ಆದೇಶಿಸಲಾಗಿದೆ.

ಕಿಹಿಮ್ ಬೀಚ್‌ನಲ್ಲಿನ ನೀಮೋ ಒಡೆತನದ ಬಂಗಲೆ ಕರಾವಳಿ ನಿಯಂತ್ರಣ ವಲಯ ಉಲ್ಲಂಘಿಸಿದೆ. ಹೀಗಾಗಿ 33,000 ಚದರ ಅಡಿಯಲ್ಲಿ ನಿರ್ಮಿಸಲಾದ 100 ಕೋಟಿ ರು. ಮೌಲ್ಯ ಬಂಗಲೆ ಕೆಡವಲಾಗುತ್ತಿದೆ ಎಂದು ರಾಯಗಢ ಡಿಸಿ ಸೂರ್ಯಸ್ವಾಮಿ ಹೇಳಿದ್ದಾರೆ.

ನಿಯಮಾವಳಿ ಉಲ್ಲಂಘಿಸಿದ ಅಕ್ರಮ ಕಟ್ಟಡ ಕೆಡವಲು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶ ನೀಡಿತ್ತು