Asianet Suvarna News Asianet Suvarna News

ಬೆಂಗಳೂರಿನ ಪ್ರತಿಷ್ಠಿತ ಶಾಲೆಯು ಸಂಪೂರ್ಣ ಚೀನೀಮಯ; ಪೋಷಕರ ಆಕ್ರೋಶ

ಬೆಂಗಳೂರಿನ ಪ್ರತಿಷ್ಠಿತ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಚೀನೀ ಹೊಸ ವರ್ಷಾಚರಣೆಗೆಂದು ಭವ್ಯ ಕಾರ್ಯಕ್ರಮ ಆಯೋಜಿಸಿದೆ. ಒಂದನೇ ತರಗತಿಯ ಮಕ್ಕಳಿಗೆ ವಿವಿಧ ಚೀನೀ ಸಾಂಸ್ಕೃತಿ ಕಾರ್ಯಕ್ರಮ ಆಯೋಜಿಸಿದೆ. ಬ್ರಿಟಿಷ್ ಕೌನ್ಸಿಲ್'ನ ಅಂತಾರಾಷ್ಟ್ರೀಯ ಶಾಲಾ ಪ್ರಶಸ್ತಿಗೆ ಸ್ಪರ್ಧೆಯಾಗಿ ಡೆಲ್ಲಿ ಪಬ್ಲಿಕ್ ಶಾಲೆಯು ಈ ಕಾರ್ಯಕ್ರಮ ನಡೆಸಿದೆ ಎಂದು ವಿಜಯಕರ್ನಾಟಕ ಪತ್ರಿಕೆಯ ವರದಿಯಲ್ಲಿ ಬರೆಯಲಾಗಿದೆ.

delhi public school of bengaluru creates controversy on chinese day program

ಬೆಂಗಳೂರು(ಆ. 10): ನೂಡಲ್ಸ್, ಫ್ರೈಡ್'ರೈಸ್, ಗೋಬಿ ಮಂಚೂರಿಯನ್ನೇ ತರಬೇಕು... ಗ್ಲಿಟ್ಟರ್ ಟ್ಯೂಬ್'ನಂತಹ ಮಿಂಚುಳ್ಳಿ ವಸ್ತುಗಳನ್ನ ತರಬೇಕು... ಚೀನಾದ ಸಾಂಪ್ರದಾಯಿಕ ಉಡುಗೆಗಳನ್ನೇ ತೊಟ್ಟು ಶಾಲೆಗೆ ಬರಬೇಕು. ಹೀಗೆಂದು ಮಕ್ಕಳಿಗೆ ಶಾಲೆಯ ಆಡಳಿತ ಮಂಡಳಿ ಸುತ್ತೋಲೆ ಹೊರಡಿಸಿದೆ.

ಇದ್ಯಾವುದೋ ಚೀನೀ ಶಾಲೆ ಇರಬೇಕು ಎಂದು ನೀವಂದುಕೊಂಡಿದ್ದರೆ ತಪ್ಪು. ಬೆಂಗಳೂರಿನ ಪ್ರತಿಷ್ಠಿತ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಚೀನೀ ಹೊಸ ವರ್ಷಾಚರಣೆಗೆಂದು ಭವ್ಯ ಕಾರ್ಯಕ್ರಮ ಆಯೋಜಿಸಿದೆ. ಒಂದನೇ ತರಗತಿಯ ಮಕ್ಕಳಿಗೆ ವಿವಿಧ ಚೀನೀ ಸಾಂಸ್ಕೃತಿ ಕಾರ್ಯಕ್ರಮ ಆಯೋಜಿಸಿದೆ. ಬ್ರಿಟಿಷ್ ಕೌನ್ಸಿಲ್'ನ ಅಂತಾರಾಷ್ಟ್ರೀಯ ಶಾಲಾ ಪ್ರಶಸ್ತಿಗೆ ಸ್ಪರ್ಧೆಯಾಗಿ ಡೆಲ್ಲಿ ಪಬ್ಲಿಕ್ ಶಾಲೆಯು ಈ ಕಾರ್ಯಕ್ರಮ ನಡೆಸಿದೆ ಎಂದು ವಿಜಯಕರ್ನಾಟಕ ಪತ್ರಿಕೆಯ ವರದಿಯಲ್ಲಿ ಬರೆಯಲಾಗಿದೆ.

ಭಾರತ ಮತ್ತು ಚೀನಾ ನಡುವೆ ಗಡಿ ಕಗ್ಗಂಟು ವಿಕೋಪಕ್ಕೆ ತಿರುಗಿ ಯುದ್ಧದ ಕಾರ್ಮೋಡ ಮುತ್ತಿಕೊಳ್ಳುವಂತಹ ಸ್ಥಿತಿ ಇರುವಾಗ ಭಾರತದ ಶಾಲೆಯಲ್ಲಿ ಚೀನಾದ ವೈಭವೀಕರಣ ನಡೆಯುತ್ತಿರುವುದು ಎಷ್ಟು ಪ್ರಸ್ತುತ? ಹಾಗೆಂದು, ಡೆಲ್ಲಿ ಪಬ್ಲಿಕ್ ಶಾಲಾ ಮಕ್ಕಳ ಪೋಷಕರು ಆತಂಕದಿಂದ ಪ್ರಶ್ನಿಸುತ್ತಿದ್ದಾರೆ.

ಇದೇ ವೇಳೆ, ಸುವರ್ಣನ್ಯೂಸ್'ನಲ್ಲಿ ಈ ವರದಿ ಬಿತ್ತರವಾದ ಬಳಿಕ ಡೆಲ್ಲಿ ಪಬ್ಲಿಕ್ ಸ್ಕೂಲ್ ಈ ಕಾರ್ಯಕ್ರಮವನ್ನೇ ರದ್ದು ಮಾಡಿದೆ.

Follow Us:
Download App:
  • android
  • ios