ಸುನಂದಾ ಪುಷ್ಕರ್​ ಸಾವಿಗೂ ಮೊದಲಿನ ಫೋನ್ ಸಂಭಾಷಣೆಯನ್ನು ರಿಪಬ್ಲಿಕ್​ ಟಿವಿ ಕಳೆದ ವಾರ ಪ್ರಸಾರ ಮಾಡಿತ್ತು. ಇದಾದ ನಂತರ ಸುನಂದಾ ಕೊಲೆ ಪ್ರಕರಣ ಸಮರ್ಪಕವಾಗಿ ತನಿಖೆಯಾಗಿಲ್ಲ ಎಂಬ ಒತ್ತಾಯ ಕೇಳಿ ಬಂದಿತ್ತು.

ನವದೆಹಲಿ(ಮೇ.27): ಮಾಜಿ ಕೇಂದ್ರ ಸಚಿವ ಶಶಿ ತರೂರ್​ ಪತ್ನಿ ಸುನಂದ ಪುಷ್ಕರ್ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರು ತನಿಖೆಗೆ ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ.

ತನಿಖೆ ವೇಳೆ ಕೆಲವು ವೈಫಲ್ಯ ಆಗಿರೋದನ್ನು ದೆಹಲಿ ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ದೆಹಲಿಯ ಪೊಲೀಸ್​ ಅಧಿಕಾರಿಗಳು ಮಾಡಿದ್ದ ಟಿಪ್ಪಣಿ ಮತ್ತು ಎಲ್ಲ ಫೈಲ್ಸ್​ಗಳೂ ಸುವರ್ಣನ್ಯೂಸ್ ಸಹೋದರ ಸಂಸ್ಥೆ ರಿಪಬ್ಲಿಕ್​ ಟಿವಿಗೆ ಸಿಕ್ಕಿವೆ. ಈ ಫೈಲ್ಸ್​ಗಳಲ್ಲಿ ತನಿಖೆ ಸಮರ್ಪಕವಾಗಿ ಆಗಿಲ್ಲ ಅನ್ನೋದನ್ನ ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಸುನಂದಾ ಪುಷ್ಕರ್​ ಸಾವಿಗೂ ಮೊದಲಿನ ಫೋನ್ ಸಂಭಾಷಣೆಯನ್ನು ರಿಪಬ್ಲಿಕ್​ ಟಿವಿ ಕಳೆದ ವಾರ ಪ್ರಸಾರ ಮಾಡಿತ್ತು. ಇದಾದ ನಂತರ ಸುನಂದಾ ಕೊಲೆ ಪ್ರಕರಣ ಸಮರ್ಪಕವಾಗಿ ತನಿಖೆಯಾಗಿಲ್ಲ ಎಂಬ ಒತ್ತಾಯ ಕೇಳಿ ಬಂದಿತ್ತು. ಈಗ ಪೊಲೀಸರೇ ದಾಖಲಿಸಿರುವ ಟಿಪ್ಪಣಿಗಳಲ್ಲಿ ತನಿಖೆ ಸರಿಯಾಗಿ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ರಿಪಬ್ಲಿಕ್​ ಟಿವಿ ವರದಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುಬ್ರಹ್ಮಣ್ಯಸ್ವಾಮಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. 2014ರ ಜನವರಿ 17ರಂದು ದೆಹಲಿಯ ಫೈವ್ ಸ್ಟಾರ್ ಹೊಟೇಲ್​ವೊಂದರಲ್ಲಿ ಸುನಂದ ಪುಷ್ಕರ್ ರವರು ಸಾವನ್ನಪ್ಪಿದ್ದರು.