ಶಶಿಕಲಾ ನಟರಾಜನ್ ಅಳಿಯ ಟಿ.ಟಿವಿ ದಿನಕರನ್ ಅವರು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ಕೊಟ್ಟು ಕೊಂಡುಕೊಳ್ಳುವ ಸಂಬಂಧ ಸಹಾಯ ಮಾಡಿದ ಆರೋಪಕ್ಕಾಗಿ ದೆಹಲಿ ಪೊಲೀಸರು ಸೋಮವಾರ ರಾತ್ರಿ ವಿ.ಸಿ ಪ್ರಕಾಶ್’ರನ್ನು ಕರೆದು ವಿಚಾರಣೆಗೊಳಪಡಿಸಿದ್ದು ಮಂಗಳವಾರ ಸಂಜೆ ವಿಚಾರಣೆ ಮುಗಿಸಿ ಕಳುಹಿಸಕೊಡಲಾಗಿದೆ ಎಂದು ದೆಹಲಿ ಪೊಲೀಸ ಮೂಲಗಳು ತಿಳಿಸಿವೆ .

ಬೆಂಗಳೂರು (ಮೇ.17): ಶಶಿಕಲಾ ನಟರಾಜನ್ ಅಳಿಯ ಟಿ.ಟಿವಿ ದಿನಕರನ್ ಅವರು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ಕೊಟ್ಟು ಕೊಂಡುಕೊಳ್ಳುವ ಸಂಬಂಧ ಸಹಾಯ ಮಾಡಿದ ಆರೋಪಕ್ಕಾಗಿ ದೆಹಲಿ ಪೊಲೀಸರು ಸೋಮವಾರ ರಾತ್ರಿ ವಿ.ಸಿ ಪ್ರಕಾಶ್’ರನ್ನು ಕರೆದು ವಿಚಾರಣೆಗೊಳಪಡಿಸಿದ್ದು ಮಂಗಳವಾರ ಸಂಜೆ ವಿಚಾರಣೆ ಮುಗಿಸಿ ಕಳುಹಿಸಕೊಡಲಾಗಿದೆ ಎಂದು ದೆಹಲಿ ಪೊಲೀಸ ಮೂಲಗಳು ತಿಳಿಸಿವೆ .

ಕಳೆದ ಮೂರು ತಿಂಗಳಿನಿಂದ ಪ್ರಕಾಶ್ ಟಿ.ಟಿವಿ ದಿನಕರನ್ ಜೊತೆ ಹೆಚ್ಚಾಗಿ ಓಡಾಡುತ್ತಿದ್ದರು ಅಷ್ಟೇ ಅಲ್ಲ ಶಶಿಕಲಾ ನಟರಾಜನ್ ಅವರಿಗೆ ಬೆಂಗಳೂರಿನಲ್ಲಿ ಲೋಕಲ್ ಸಹಾಯಕ್ಕಾಗಿ ಆರಂಭಗೊಂಡ ಸಂಬಂಧ ನಂತರ ದಿನಕರನ್ ಜೊತೆ ಆತ್ಮೀಯವಾಗಿ ಮುಂದುವರೆದಿತ್ತು . ಅಷ್ಟೇ ಅಲ್ಲ ದಿನಕರನ್ ಜೊತೆ ಪ್ರಕಾಶ್ ಅನೇಕ ಬಾರಿ ದೆಹಲಿಗೆ ಕೂಡ ಬಂದು ಹೋಗಿದ್ದರು ಎಂದು ದೆಹಲಿ ಪೊಲೀಸ ಮೂಲಗಳು ಹೇಳುತ್ತಿದ್ದು ಸುಕೇಶ್ ಚಂದ್ರಶೇಖರ ಜೊತೆ ಕೂಡ ದಿನಕರನ್ ಪರವಾಗಿ ಪ್ರಕಾಶ್ ಮಾತನಾಡಿದ್ದರು ಎಂದು ಹೇಳಲಾಗುತ್ತಿದೆ . ಹೀಗಾಗಿಯೇ ಪ್ರಕರಣದ ಹೆಚ್ಚಿನ ವಿಚಾರಣೆ ಸಂಬಂಧ ದೆಹಲಿ ಪೊಲೀಸರು ಪ್ರಕಾಶ್ರನ್ನು ಕರೆಸಿದ್ದರು ಎಂದು ತಿಳಿದು ಬಂದಿದೆ .

ಕಳೆದ 4 ವರ್ಷಗಳಿಂದ ಜಿ.ಪರಮೇಶ್ವರ ನೆರಳಾಗಿಯೇ ಇರುತ್ತಿದ್ದ ಪ್ರಕಾಶ ರಾಜಕೀಯ ವಲಯಗಳಲ್ಲಿ ಆಸ್ಟ್ರೇಲಿಯನ್ ಪ್ರಕಾಶ್ ಎಂದೇ ಹೆಸರುವಾಸಿಯಾಗಿದ್ದರು . ಪರಮೇಶ್ವರ್ ಆಸ್ಟ್ರೇಲಿಯದಲ್ಲಿ ಪಿಎಚ್'ಡಿ ಮಾಡಲು ಹೋದಾಗ ಪರಿಚಯವಾಗಿದ್ದ ಪ್ರಕಾಶ್ ಪರಮೇಶ್ವರ್ ಅಧ್ಯಕ್ಷರಾದಾಗ ವಿದೇಶದಲ್ಲಿನ ನೌಕರಿ ಬಿಟ್ಟು ಅವರ ಜೊತೆಯೇ ಓಡಾಡಲು ಆರಂಭಿಸಿದ್ದರು . ಪರಮೇಶ್ವರ್ ಪ್ರಕಾಶ್'ರನ್ನು ರಾಜ್ಯ ಸರ್ಕಾರದ ಎನ್ಆರ್'ಐ ಸೆಲ್'ನ ಉಪಾಧ್ಯಕ್ಷರಾಗಿಯೂ ನೇಮಿಸಿದ್ದರು . ಆದರೆ ಮೂರು ವರ್ಷಗಳ ನಂತರ ಪ್ರಕಾಶ್'ರನ್ನು ಸಿದ್ಧರಾಮಯ್ಯ ಸರ್ಕಾರ ಮುಂದುವರೆಸದೆ ಇದ್ದಾಗ ಪರಮೇಶ್ವರರನ್ನೇ ಬಯ್ದುಕೊಂಡು ಓಡಾಡುತ್ತಿದ್ದರು .

ಆದರೆ ಪರಮೇಶ್ವರ್'ರಿಂದ ದೂರವಾದಾಗಲೇ ಶಶಿಕಲಾ ಜೈಲಿಗೆ ಹೋದಾಗ ಪರಪ್ಪನ ಅಗ್ರಹಾರದಲ್ಲಿ ಸಣ್ಣ ಪುಟ್ಟ ಸಹಾಯಕ್ಕಾಗಿ ಆರಂಭಗೊಂಡ ಪ್ರಕಾಶ್ ಮತ್ತು ಟಿ.ಟಿವಿ ದಿನಕರನ್ ಜೊತೆಗಿನ ಒಡನಾಟ ಸುಕೇಶ್ ಚಂದ್ರಶೇಖರ್ ಜೊತೆ ಸಖ್ಯದವರೆಗೆ ಬಂದು ನಿಂತಿತ್ತು ಎಂದು ದೆಹಲಿ ಪೊಲೀಸ ಮೂಲಗಳು ಹೇಳುತ್ತಿದ್ದು ಹವಾಲಾ ಹಣ ಹೊಂದಿಸುವಲ್ಲಿ ಕೂಡ ಪ್ರಕಾಶ್ ಪಾತ್ರ ಇತ್ತು ಎಂದು ಹೇಳಲಾಗುತ್ತಿದೆ .ಹಣವನ್ನು ಬೆಂಗಳೂರಿನಿಂದ ಕೊಚ್ಚಿ ಅಲ್ಲಿಂದ ದೆಹಲಿಗೆ ಹವಾಲಾ ಮೂಲಕ ಕಳುಹಿಸುವಲ್ಲಿ ಪ್ರಕಾಶ್ ರೋಲ್ ಇತ್ತು ಎಂದು ಹೇಳಲಾಗುತ್ತಿದೆ.