ಕೇಂದ್ರೀಯ ತನಿಖಾ ದಳದ ಮುಂದಿನ ಮುಖ್ಯಸ್ಥರಾಗಿ ದೆಹಲಿ ಪೋಲಿಸ್ ಆಯುಕ್ತ ಅಲೋಕ್ ವರ್ಮಾ ನೇಮಕಗೊಳ್ಳಲಿದ್ದಾರೆ.
ನವದೆಹಲಿ (ಜ.19): ಕೇಂದ್ರೀಯ ತನಿಖಾ ದಳದ ಮುಂದಿನ ಮುಖ್ಯಸ್ಥರಾಗಿ ದೆಹಲಿ ಪೋಲಿಸ್ ಆಯುಕ್ತ ಅಲೋಕ್ ವರ್ಮಾ ನೇಮಕಗೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇವರ ನೇಮಕಾತಿಗೆ ಅನುಮೋದನೆ ನೀಡಿದ್ದಾರೆ. 2 ವರ್ಷಗಳ ಕಾಲ ಸಿಬಿಐಗೆ ಅಲೋಕ್ ವರ್ಮಾ ಮುಖ್ಯಸ್ಥರಾಗಿರಲಿದ್ದಾರೆ.
ಸಿಬಿಐ ಹಂಗಾಮಿ ಮುಖ್ಯಸ್ಥ ಆರ್ ಕೆ ಆಸ್ಥಾನ ನೇಮಕವು ಭಾರೀ ವಿವಾದಕ್ಕೆ ಕಾರಣವಾಗಿದ್ದು ಇವರ ನೇಮಕವನ್ನು ಪ್ರಶಾಂತ್ ಭೂಷಣ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿ ಸದಸ್ಯ ಸಮಿತಿಯು ಈ ವಾರ ಮಾತುಕತೆ ನಡೆಸಿ ಮುಂದಿನ ಸಿಬಿಐ ಮುಖ್ಯಸ್ಥರನ್ನು ಆಯ್ಕೆ ಮಾಡಿತ್ತು. ಸಭೆಯಲ್ಲಿ ಅಲೋಕ್ ವರ್ಮಾ 2/3 ಮತವನ್ನು ಪಡೆದಿದ್ದರು.
