ದಿಲ್ಲಿ :  ಮೆಟ್ರೋ ಪ್ರಯಾಣ ಎಲ್ಲರಿಗೂ ಕೈಗೆಟುಕುವ ದರದಲ್ಲಿದೆ ಎಂದು ಭಾವಿಸಿದಲ್ಲಿ ಅದು ತಪ್ಪಾಗಲಿದೆ. ಯಾಕೆಂದರೆ ಈ ಬಗ್ಗೆ ತಜ್ಞರು ಅಭಿಪ್ರಾಯ ಒಂದನ್ನು ಹೊರ ಹಾಕಿದ್ದು ದಿಲ್ಲಿಯ ಮೆಟ್ರೋ ಪ್ರಯಾಣ ಅತ್ಯಂತ ದುಬಾರಿಯಾದುದಾಗಿದೆ ಎಂದು ಹೇಳಿದ್ದಾರೆ. 

ದಿಲ್ಲಿಯಲ್ಲಿ ಪ್ರಯಾಣಿಕರು ತಮ್ಮ ಆದಾಯದಲ್ಲಿ ಶೇ19ರಷ್ಟನ್ನು ಮೆಟ್ರೋ ಪ್ರಯಾಣಕ್ಕಾಗಿಯೇ ವೆಚ್ಚ ಮಾಡುತ್ತಿದ್ದಾರೆ.  ಆದರೆ ಸಾಮಾನ್ಯ ಸಾರಿಗೆಗ ಶೇ.15ರಷ್ಟನ್ನು ವ್ಯಯ ಮಾಡಿದರೆ ಸಾಕು ಎಂದು ತಜ್ಞರು ಹೇಳಿದ್ದಾರೆ. 

ಮಂಗಳವಾರ ನಡೆದ 2 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿಶ್ವ ನಗರ ಸಾರಿಗೆ ವ್ಯವಸ್ಥೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. 

ದಿಲ್ಲಿಯ ಮೆಟ್ರೋ ಪ್ರಯಾಣ ದರವು ಅತ್ಯಂತ ದುಬಾರಿಯಾಗಿದ್ದು ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ವಿಯೆಟ್ನಾಂನ ಹನೋಯ್ ಇದೆ. 

ದುಬಾರಿ ಪ್ರಮಾಣವನ್ನು ಪ್ರಯಾಣಿಕರು ವೆಚ್ಚ ಮಾಡುವ ಪ್ರಮಾಣದ ಮೇಲೆ ನಿರ್ಧಾರ ಮಾಡಲಾಗುತ್ತದೆ. ದಿಲ್ಲಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ ಎನ್ನಲಾಗಿದೆ.