2014ರ ಜುಲೈ ತಿಂಗಳಲ್ಲೂ ಒಮ್ಮೆ ಇದೇ ರೀತಿಯ ಘಟನೆ ಸಂಭವಿಸಿತ್ತು.

ದಿಲ್ಲಿ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ ನಿನ್ನೆ ಸೋಮವಾರ ಪ್ರಯಾಣಿಸುತ್ತಿದ್ದವರಿಗೆ ಜೀವವೇ ಬಾಯಿಗೆ ಬಂದಂತಹ ಭಯಾನಕ ಅನುಭವ ಉಂಟಾದ ಘಟನೆ ವರದಿಯಾಗಿದೆ. ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ದಿಲ್ಲಿ ಮೆಟ್ರೋ ಎರಡು ಸ್ಟೇಶನ್‌ಗಳ ನಡುವೆ ಚಲಿಸುತ್ತಿದ್ದಾಗ ಅದರ ಒಂದು ಬಾಗಿಲು ತೆರೆದುಕೊಂಡೇ ಇದ್ದದ್ದು ಪ್ರಯಾಣಿಕರಲ್ಲಿ ತೀವ್ರ ಭಯ, ಆತಂಕವನ್ನು ಉಂಟುಮಾಡಿತು. ಈ ಘಟನೆ ನಡೆದದ್ದು ಸೋಮವಾರ ರಾತ್ರಿ 10 ಗಂಟೆಯ ವೇಳೆ. ಆಗ ಮೆಟ್ರೋ ರೈಲು ಚೌರಿ ಬಜಾರ್‌ ಮತ್ತು ಕಶ್‌ಮೇರೆ ಗೇಟ್‌ ಸ್ಟೇಶನ್‌ ನಡುವೆ ಓಡುತ್ತಿತ್ತು. ಈ ಮಾರ್ಗವು ಉತ್ತರ ದಿಲ್ಲಿಯನ್ನು ಗುರುಗ್ರಾಮದೊಂದಿಗೆ ಜೋಡಿಸುತ್ತದೆ. 2014ರ ಜುಲೈ ತಿಂಗಳಲ್ಲೂ ಒಮ್ಮೆ ಇದೇ ರೀತಿಯ ಘಟನೆ ಸಂಭವಿಸಿತ್ತು. ಆಗ ಮೆಟ್ರೋ ರೈಲು ತೋರ್‌ನೀ ಮತ್ತು ಅರ್ಜನ್‌ಗಢ ನಡುವೆ ಓಡುತ್ತಿತ್ತು ಮತ್ತು ಯೆಲ್ಲೋ ಲೈನ್‌ನಲ್ಲಿ ಅದರ ಎಲ್ಲ ಬಾಗಿಲುಗಳು ತೆರೆದುಕೊಂಡಿದ್ದವು. ಈ ಘಟನೆಯ ಬೆನ್ನಿಗೇ ಸುರಕ್ಷೆಯ ಲೋಪಕ್ಕಾಗಿ ಮೆಟ್ರೋ ಚಾಲಕನನ್ನು ಅಮಾನತು ಮಾಡಲಾಗಿತ್ತು. ದಿಲ್ಲಿ ಮೆಟ್ರೋದ ಯೆಲ್ಲೋ ಲೈನ್‌ ಗುರ್ಗಾಂವ್‌ನ ಹುದಾ ನಗರ ಕೇಂದ್ರವನ್ನು ಉತ್ತರ ದಿಲ್ಲಿಯ ಸಮಯ್‌ಪುರ್‌ ಬದ್ಲಿ ಜತೆಗೆ ಜೋಡಿಸುತ್ತದೆ.