Asianet Suvarna News Asianet Suvarna News

ಯೋಗಿ ನಡೆಯನ್ನು ಅನುಸರಿಸಿದ ಕೇಜ್ರಿ ಸರ್ಕಾರ

ಇತ್ತೀಚಿಗಷ್ಟೆ ಯೋಗಿ ಆದಿತ್ಯನಾಥ್ ಸರ್ಕಾರ ಗಣ್ಯವ್ಯಕ್ತಿಗಳ ಜನ್ಮ ದಿನಾಚರಣೆಗಳು ಹಾಗೂ ಪುಣ್ಯತಿಥಿಗಳನ್ನು ಒಳಗೊಂಡ ಸರ್ಕಾರಿ ರಜೆ ದಿನಗಳನ್ನು ರದ್ದುಗೊಳಿಸಿತ್ತು. ಅದೇ ನೆಡೆಯನ್ನು ದೆಹಲಿ ಸರ್ಕಾರ ಅನುಸರಿಸಿದ್ದು, ಜನ್ಮ ದಿನಾಚರಣೆಗಳು ಹಾಗೂ ಪುಣ್ಯತಿಥಿಗಳನ್ನು ಒಳಗೊಂಡ ಸರ್ಕಾರಿ ರಜಾ ದಿನಗಳನ್ನು ರದ್ದುಪಡಿಸಿದೆ.

Delhi govt will cancel public holidays on birth death anniversaries of eminent people

ನವದೆಹಲಿ(ಏ.28): ದೇಶದಲ್ಲಿ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹೊಸ ಅಲೆ ಸೃಷ್ಟಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ನಡೆಯನ್ನು ನವದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಅನುಸರಿಸುತ್ತಿದ್ದಾರೆ.

ಇತ್ತೀಚಿಗಷ್ಟೆ ಯೋಗಿ ಆದಿತ್ಯನಾಥ್ ಸರ್ಕಾರ ಗಣ್ಯವ್ಯಕ್ತಿಗಳ ಜನ್ಮ ದಿನಾಚರಣೆಗಳು ಹಾಗೂ ಪುಣ್ಯತಿಥಿಗಳನ್ನು ಒಳಗೊಂಡ ಸರ್ಕಾರಿ ರಜೆ ದಿನಗಳನ್ನು ರದ್ದುಗೊಳಿಸಿತ್ತು. ಅದೇ ನೆಡೆಯನ್ನು ದೆಹಲಿ ಸರ್ಕಾರ ಅನುಸರಿಸಿದ್ದು, ಜನ್ಮ ದಿನಾಚರಣೆಗಳು ಹಾಗೂ ಪುಣ್ಯತಿಥಿಗಳನ್ನು ಒಳಗೊಂಡ ಸರ್ಕಾರಿ ರಜಾ ದಿನಗಳನ್ನು ರದ್ದುಪಡಿಸಿದೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ತಿಳಿಸಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ'ಉತ್ತರ ಪ್ರದೇಶ ಕೆಲವು ಸರ್ಕಾರ ಸರ್ಕಾರಿ ರಜೆ ದಿನಗಳನ್ನು ರದ್ದುಪಡಿಸಿರುವುದು ಆಡಳಿತ ಪ್ರಕ್ರಿಯೆಯ ಉತ್ತಮ ಆರಂಭವಾಗಿದ್ದು, ನಾವು ಸಹ ಅವರಿಂದ ಇಂತಹ ಕೆಲವು ನಿರ್ಧಾರಗಳನ್ನು ಅನುಸರಿಸಿ ಜಾರಿಗೊಳಿಸಲಿದ್ದೇವೆ' ಎಂದು ಟ್ವೀಟ್ ಮಾಡಿದ್ದು, ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರಿಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ' ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ  ವಾಲ್ಮಿಕಿ ಜಯಂತಿ ಹಾಗೂ ಮಿಲಾದ್ ಉನ್ ನಬಿ ಚಾತ್ ಅವರ ಜನ್ಮ ದಿನಾಚರಣೆ ಒಳಗೊಂಡು ಒಟ್ಟು 15 ರಜೆ ದಿನಗಳನ್ನು ರದ್ದು ಪಡಿಸಿತ್ತು. ಬಹುತೇಕ ರಜಾ ದಿನಗಳು ಬಿಎಸ್ಪಿ ಹಾಗೀ ಎಸ್ಪಿ ಸರ್ಕಾರ ಘೋಷಿಸಿದ ರಜಾದಿನಾಗಳಾಗಿವೆ.

Follow Us:
Download App:
  • android
  • ios