ನವದೆಹಲಿ(ಜ.04): ಫೆರಾ ಉಲ್ಲಂಘನೆ ಪ್ರಕರಣದಲ್ಲಿ ವಿಜಯ್ ಮಲ್ಯ'ನನ್ನು ಘೋಷಿತ ಅಪರಾಧಿ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್'ಗೆ ಹಾಜರಾಗಲು ವಿಜಯ್ ಮಲ್ಯ ಸೇರಿದಂತೆ ಅವರ ಪ್ರತಿನಿಧಿಗಳಿಎ 30 ದಿನಗಳ ಕಾಲ ಅವಕಾಶ ನೀಡಲಾಗಿತ್ತು. ಆದರೆ ಯಾರೊಬ್ಬರೂ ಹಾಜರಾಗದ ಕಾರಣ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ಶೆಹ್ರವತ್ ' ಘೋಷಿತ ಅಪರಾಧಿ ಎಂದು ತೀರ್ಪು ನೀಡಿದರು.

ಭಾರತೀಯ ಬ್ಯಾಂಕ್'ಗಳಿಂದ ಸಾವಿರಾರು ಕೋಟಿ ಸಾಲ ಮಾಡಿ ಲಂಡನ್'ನಲ್ಲಿ ತಲೆ ತಪ್ಪಿಸಿಕೊಂಡಿರುವ ವಿಜಯ್ ಮಲ್ಯ ವಿರುದ್ಧ ಏಪ್ರಿಲ್ 12ರಂದು ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. ಮದ್ಯದ ದೊರೆ ವಿರುದ್ಧ ಹಲವು ಪ್ರಕರಣಗಳಿದ್ದರೂ ಕೋರ್ಟ್'ಗೆ ಹಾಜರಾಗದ ಕಾರಣ ದಬ್ಬಾಳಿಕೆ ಪ್ರಕ್ರಿಯೆ ಮುಂದುವರಿಸಿದ್ದಾರೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ಭಾರತೀಯ ಹಲವು ಬ್ಯಾಂಕ್'ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿರುವ ವಿಜಯ್ ಮಲ್ಯ ಸಾಲ ಹಿಂತಿರುಗಿಸದೆ ಲಂಡನ್'ನಲ್ಲಿ ತಲೆ ತಪ್ಪಿಸಿಕೊಂಡಿದ್ದಾರೆ. ಬ್ರಿಟೀಷ್ ನ್ಯಾಯಾಲಯದಲ್ಲೂ ಭಾರತ ದಾವೆ ಹೂಡಿದ್ದರೂ ಮಲ್ಯ ಜಾಮೀನು ಪಡೆದು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.