ನವದೆಹಲಿ(ಜ.13): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಪತ್ರ ಬಂದಿದ್ದು, ಕೇಜ್ರಿ ಪುತ್ರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಕೇಜ್ರಿವಾಲ್ ಕಚೇರಿಗೆ ಬಂದಿರುವ ಅನಾಮಿಕ ಇ- ಮೇಲ್ ನಲ್ಲಿ  ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಲಾಗಿದೆ. ಕಳೆದ ಜ.9 ರಂದು ಬಂದಿರುವ ಬೆದರಿಕೆ ಇ- ಮೇಲ್ ದೆಹಲಿಯ ಪೊಲೀಸ್ ಆಯುಕ್ತ ಅಮೂಲ್ಯ ಪಾಟ್ನಯಕ್ ಅವರಿಗೆ ವರ್ಗಾಯಿಸಲಾಗಿದೆ.

ಬೆದರಿಕೆ ಇ-ಮೇಲ್ ಬಂದಿರುವುದನ್ನು ದೆಹಲಿ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದು, ಅದನ್ನು ಸೈಬರ್ ವಿಭಾಗದ ವಿಶೇಷ ಘಟಕ್ಕೆ ವರ್ಗಾಯಿಸಲಾಗಿದೆ. ಯಾವ ಇ- ಮೇಲ್ ಖಾತೆಯಿಂದ ಈ ಕರೆ ಬಂದಿದೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.