ಆಪ್‌ ನಾಯಕ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೆಸರಲ್ಲಿ ದೆಹಲಿ ಬಿಜೆಪಿ ನಾಯಕರೊಬ್ಬರು ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದ್ದಾರೆ.

ನವದೆಹಲಿ: ಆಪ್‌ ನಾಯಕ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೆಸರಲ್ಲಿ ದೆಹಲಿ ಬಿಜೆಪಿ ನಾಯಕರೊಬ್ಬರು ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೇನೋ ಅವರ ಮೇಲಿನ ಅಭಿಮಾನದಿಂದಲ್ಲ. ಕೇಜ್ರಿವಾಲ್‌ರನ್ನು ಓರ್ವ ಮಹಾ ಸುಳ್ಳುಕೋರ ಎಂದು ಬಣ್ಣಿಸಿರುವ ಬಿಜೆಪಿ ನಾಯಕ ತೇಜೀಂದರ್‌ಪಾಲ್‌ ಸಿಂಗ್‌ ಬಗ್ಗಾ, ಆಪ್‌ ಮುಖಂಡನ ಹೆಸರಲ್ಲಿ ‘ಭಾರತದ ಅತಿದೊಡ್ಡ ಸುಳ್ಳುಗಾರ’ ಎಂಬ ಪ್ರಶಸ್ತಿ ಆರಂಭಿಸಿದ್ದಾರೆ.

ತಮ್ಮ ವಿರೋಧಿಗಳ ವಿರುದ್ಧ ಕೇಜ್ರಿವಾಲ್‌ ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡುತ್ತಾರೆ, ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆಪಾದಿಸಿರುವ ಬಗ್ಗಾ, ಟ್ವೀಟ್‌ ಮಾಡಿ ಪ್ರಶಸ್ತಿ ಬಗ್ಗೆ ಪ್ರಕಟಿಸಿದ್ದಾರೆ. ಅತಿದೊಡ್ಡ ಸುಳ್ಳುಕೋರರಿಗೆ 5,100 ನಗದು, ಕೇಜ್ರಿವಾಲ್‌ ಪ್ರಶಸ್ತಿ ನೀಡುವುದಾಗಿ ಅವರು ಘೋಷಿಸಿದ್ದಾರೆ.