ಅದೃಷ್ಟವಶಾತ್ ಭಾರೀ ವಿಮಾನಗಳ ಅಪಘಾತ ತಪ್ಪಿತು
ನವದೆಹಲಿ(ಡಿ.27): ಇಲ್ಲಿನ ಏರ್'ಪೋರ್ಟ್'ನಲ್ಲಿ ಪರಸ್ಪರ ಡಿಕ್ಕಿಯಾಗಬೇಕಿದ್ದ ವಿಮಾನಗಳ ಅಪಘಾತ ಸ್ವಲ್ಪದರಲ್ಲೇ ತಪ್ಪಿದೆ. ರನ್'ವೇ ನಲ್ಲಿ ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನ ಲ್ಯಾಂಡ್ ಆದ ಕೆಲ ಹೊತ್ತಿನಲ್ಲಿಯೇ ಪ್ರಯಾಣಿರಿದ್ದ ಏರ್ ಇಂಡಿಗೋ ವಿಮಾನವು ಸಹ ಅದೆ ಎದುರಿನಲ್ಲಿಯೇ ಲ್ಯಾಂಡ್ ಡಿಕ್ಕಿ ಹೊಡೆಯುವ ರೀತಿಯಲ್ಲೆ ಸಾಗಿ ಬಂತು. ಅದೃಷ್ಟವಶಾತ್ ಭಾರೀ ವಿಮಾನಗಳ ಅಪಘಾತ ತಪ್ಪಿತು. ಪ್ರಕರಣ ಕುರಿತು ನಾಗರಿಕ ವಿಮಾನಯಾನದ ಡಿಜಿಸಿಎ ತನಿಖೆಗೆ ಆದೇಶಿಸಿದ್ದಾರೆ. ಇಂದು ಒಂದೇ ದಿನದಲ್ಲಿ 2 ವಿಮಾನ ಅವಘಡಗಳು ಸಂಭವಿಸಿವೆ. ಗೋವಾದ ಏರ್ಪೋರ್ಟ್ನಲ್ಲಿ ವಿಮಾನ ಸ್ಕಿಡ್ ಆಗಿ 15 ಮಂದಿ ಗಾಯಗೊಂಡಿದ್ದರು.
