ಕೆಲ ದಿನಗಳಿಂದ ಚಿಕೂನ್ ಗುನ್ಯಾ, ಡೆಂಗ್ಯೂವಿನಿಂದ ಬಳಲುತ್ತಿದ್ದ ದೆಹಲಿ ಇದೀಗ ದಸರಾದಲ್ಲಿ ಅದನ್ನು ಹೊಡೆದೋಡಿಸುವ ಪ್ರತೀಕವಾಗಿ ಪ್ರತಿಕೃತಿ ದಹನ ಮಾಡಲಿದೆ. ಚಿಕೂನ್ ಗುನ್ಯಾ ಪ್ರತೀಕ ಎನ್ನಲಾಗುವ ರಾವಣ, ಮಲೇರಿಯಾ ಪ್ರತೀಕ ಎನ್ನಲಾಗುವ ಕುಂಭಕರ್ಣ ಹಾಗೂ ಡೆಂಗ್ಯೂ ಪ್ರತೀಕ ಎನ್ನಲಾಗುವ ಮೇಘನಾಡ್ ಪ್ರತಿಕೃತಿಯನ್ನು ದಸರಾದಲ್ಲಿ ದಹಿಸಲಿದ್ದಾರೆ.
ನವದೆಹಲಿ (ಅ.11):ಈ ಬಾರಿ ದಸರಾವನ್ನು ರಾಷ್ಟ್ರ ರಾಜಧಾನಿ ವಿನೂತನವಾಗಿ ಆಚರಿಸಲಿದೆ.
ಕೆಲ ದಿನಗಳಿಂದ ಚಿಕೂನ್ ಗುನ್ಯಾ, ಡೆಂಗ್ಯೂವಿನಿಂದ ಬಳಲುತ್ತಿದ್ದ ದೆಹಲಿ ಇದೀಗ ದಸರಾದಲ್ಲಿ ಅದನ್ನು ಹೊಡೆದೋಡಿಸುವ ಪ್ರತೀಕವಾಗಿ ಪ್ರತಿಕೃತಿ ದಹನ ಮಾಡಲಿದೆ. ಚಿಕೂನ್ ಗುನ್ಯಾ ಪ್ರತೀಕ ಎನ್ನಲಾಗುವ ರಾವಣ, ಮಲೇರಿಯಾ ಪ್ರತೀಕ ಎನ್ನಲಾಗುವ ಕುಂಭಕರ್ಣ ಹಾಗೂ ಡೆಂಗ್ಯೂ ಪ್ರತೀಕ ಎನ್ನಲಾಗುವ ಮೇಘನಾಡ್ ಪ್ರತಿಕೃತಿಯನ್ನು ದಸರಾದಲ್ಲಿ ದಹಿಸಲಿದ್ದಾರೆ.
ಎಂದಿನಂತೆ 45 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ರಾಮಲೀಲಾ ಮೈದಾನದಲ್ಲಿ ಈ ಬಾರಿಯೂ ನವಯುವಕ್ ರಾಮಲೀಲಾ ಸಮಿತಿ ಆಚರಿಸಲಿದೆ. ಇಂದು ರಾತ್ರಿ 8 ಗಂಟೆಗೆ ಪ್ರತಿಕೃತಿ ದಹಿಸಲಾಗುತ್ತದೆ.
ಯಾವುದೇ ರಾಜಕೀಯವಿಲ್ಲದೇ ದೆಹಲಿಯು ಈ ದುಷ್ಟ ರೋಗಗಳ ವಿರುದ್ಧ ಹೋರಾಡಲಿದೆ ಎನ್ನುವುದಕ್ಕಾಗಿ ರಾವಣನ ಆಕೃತಿಯನ್ನು ದಹಿಸಲಾಗುತ್ತಿದೆ ಎಂದು ರಾಮಲೀಲಾ ಸಮಿತಿಯ ಸಂಸ್ಥಾಪಕ ಜತ್ತೇದಾರ್ ಅವತಾರ್ ಸಿಂಗ್ ಹೇಳಿದ್ದಾರೆ.