ಇಂದಿನಿಂದ ಪ್ರವಾಸಿಗರಿಗೆ ಮುಕ್ತಗೊಂಡ ಸಿಯಾಚಿನ್ ನಿರ್ಗಲ್ಲು ಪ್ರದೇಶ| ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಣೆ| ಪ್ರವಾಸಿಗರಿಗಾಗಿ ಸಿಯಾಚಿನ್ ಬೇಸ್ ಕ್ಯಾಂಪ್ ತೆರೆಯುವುದಾಗಿ ಘೋಷಿಸಿದ ರಾಜನಾಥ್ ಸಿಂಗ್| ವಿಶ್ವದ ಅತಿ ಎತ್ತರದ  ಯುದ್ಧಭೂಮಿ ಸಿಯಾಚಿನ್ ನೀರ್ಗಲ್ಲು ಪ್ರದೇಶ| ಸಿಯಾಚಿನ್ ಮೂಲ ಶಿಬಿರದಿಂದ ಕುಮಾರ್ ಪೋಸ್ಟ್‌ವರೆಗೆ ಪ್ರವಾಸಿಗರಿಗೆ ಅನುಮತಿ|

ಲಡಾಖ್(ಅ.21): ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನೀರ್ಗಲ್ಲು ಪ್ರದೇಶ ಪ್ರವಾಸಿಗರಿಗೆ ಮುಕ್ತ ಎಂದು ಘೋಷಿಸಲಾಗಿದೆ. 

ಇಂದು ಲಡಾಖ್'ಗೆ ಭೇಟಿ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರವಾಸಿಗರಿಗಾಗಿ ಆಯಕಟ್ಟಿನ ಸಿಯಾಚಿನ್ ಬೇಸ್ ಕ್ಯಾಂಪ್ ತೆರೆಯುವುದಾಗಿ ಘೋಷಿಸಿದರು.

Scroll to load tweet…

ಲಡಾಖ್ ಪ್ರವಾಸೋದ್ಯಮದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ಖಂಡಿತವಾಗಿಯೂ ಪ್ರವಾಸಿಗರನ್ನು ತನ್ನತ್ತ ಸೆಳೆಯಲಿದೆ ಎಂದು ರಾಜನಾಥ್ ಸಿಂಗ್ ಈ ವೇಳೆ ಭರವಸೆ ವ್ಯಕ್ತಪಡಿಸಿದರು.

ಸಿಯಾಚಿನ್ ಮೂಲ ಶಿಬಿರದಿಂದ ಕುಮಾರ್ ಪೋಸ್ಟ್‌ವರೆಗೆ ಇಡೀ ಪ್ರದೇಶವನ್ನು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ತೆರೆಯಲಾಗಿದೆ ಎಂದು ರಕ್ಷಣಾ ಸಚಿವರು ಸ್ಪಷ್ಟಪಡಿಸಿದರು.

Scroll to load tweet…

ಕುಮಾರ್ ಪೋಸ್ಟ್ 18,875 ಅಡಿ ಎತ್ತರದಲ್ಲಿದ್ದು, ಪ್ರವಾಸಿಗರು ಪಾರ್ಟಾಪುರದ ಮೂಲ ಶಿಬಿರದಿಂದ 11,000 ಅಡಿ ಎತ್ತರದಲ್ಲಿ ಕುಮಾರ್ ಪೋಸ್ಟ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ.