ನವದೆಹಲಿ (ಸೆ. 05): ಇತ್ತೀಚೆಗೆ ಬಿಡಿಎಫ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ ಭಾರತೀಯ ಬ್ಯಾಡ್ಮಿಂಟನ್‌ ಪಟು ಪಿ.ವಿ ಸಿಂಧು ಕುರಿತಾದ ಸಿನಿಮಾಕ್ಕೆ ಹಲವು ನಟಿಯರ ಹೆಸರು ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ದೀಪಿಕಾ ಪಡುಕೋಣೆ ಅವರೇ ಈ ಸಿನಿಮಾದಲ್ಲಿ ನಾಯಕಿಯಾಗಬೇಕು ಎಂಬ ಆಕಾಂಕ್ಷೆಯನ್ನು ಪಿ.ವಿ ಸಿಂಧು ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾಕ್ಕೆ ಯಾರು ನಾಯಕಿಯಾಗಬೇಕೆಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಆದರೆ, ಇತ್ತೀಚೆಗೆ ಆಂಗ್ಲ ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದ ಸಿಂಧು ಅವರು, ‘ನನ್ನ ಕುರಿತಾದ ಸಿನಿಮಾ ಮಾಡುವುದಾದರೆ, ಅದರಲ್ಲಿ ಪದ್ಮಾವತ್‌ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಅವರೇ ನಿರ್ವಹಿಸಬೇಕು.

ಅವರು ಉತ್ತಮ ಕಲಾವಿದೆ ಹಾಗೂ ಅವರಿಗೆ ಈ ಹಿಂದೆ ಬ್ಯಾಡ್ಮಿಂಟನ್‌ ಆಡಿದ ಅನುಭವವಿದೆ. ಆದರೆ, ಈ ಕುರಿತು ಅಂತಿಮ ನಿರ್ಧಾರ ಮಾತ್ರ ಸಿನಿಮಾ ನಿರ್ಮಾಪಕರೇ ಮಾಡಲಿದ್ದಾರೆ’ ಎಂದು ಹೇಳಿದ್ದಾರೆ.