ದೀಪಕ್ ರಾವ್ ಹತ್ಯೆ ಕೇಸ್'ನಲ್ಲಿ ಬಿಜೆಪಿ ಕಾರ್ಪೋರೇಟರ್ ಕೈವಾಡ ಆರೋಪದ ಬಗ್ಗೆ  ದೀಪಕ್ ರಾವ್ ಚಿಕ್ಕಪ್ಪ ಸಾತೋಜಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರು (ಜ.08): ದೀಪಕ್ ರಾವ್ ಹತ್ಯೆ ಕೇಸ್'ನಲ್ಲಿ ಬಿಜೆಪಿ ಕಾರ್ಪೋರೇಟರ್ ಕೈವಾಡ ಆರೋಪದ ಬಗ್ಗೆ ದೀಪಕ್ ರಾವ್ ಚಿಕ್ಕಪ್ಪ ಸಾತೋಜಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ.

ದೀಪಕ್ ಕೊಲೆ ಪ್ರಕರಣವನ್ನ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿ. ಅದು ಬಿಟ್ಟು ಯಾರ್ಯಾರ ಮೇಲೆ ಆರೋಪ ಮಾಡಿ ರಾಜಕೀಯ ಮಾಡುವುದು ಬೇಡ. ಬಿಜೆಪಿ ಕಾರ್ಪೋರೇಟರ್ ತಿಲಕ್ ರಾಜ್ ಅವರ ಜೊತೆ ನಮಗೆ ಉತ್ತಮ ಸಂಬಂಧವಿದೆ. ಅವರು ಈ ಪ್ರಕರಣದಲ್ಲಿ ಇದ್ದಾರೆ ಎನ್ನುವುದನ್ನು ನಾವು ಒಪ್ಪುವುದಿಲ್ಲ. ಆದರೆ ಈ ಬಗ್ಗೆ ಪೊಲೀಸ್ ಇಲಾಖೆಯೇ ಸೂಕ್ತ ತನಿಖೆ ನಡೆಸಲಿ. ಅದು ಬಿಟ್ಟು ಯಾರೋ ಹೇಳಿದ ವ್ಯಕ್ತಿಗಳ ಮೇಲೆ ಆರೋಪ ಹೊರಿಸಲು ನಾವು ಸಿದ್ಧರಿಲ್ಲ. ನಮ್ಮ ಮನೆ ಮಗನನ್ನು ಕಳೆದು ಕೊಂಡು ನೋವಿನಲ್ಲಿದ್ದು, ರಾಜಕೀಯ ಮಾಡಬೇಡಿ ಎಂದಿದ್ದಾರೆ.