ಬಿಜೆಪಿ ಕಾರ್ಯಕರ್ತ ದೀಪಕ್ ಹತ್ಯೆ ಖಂಡಿಸಿ ನಡೆಸುತ್ತಿರುವ  ಪ್ರತಿಭಟನೆ ಬಿಟ್ಟು ಅಂತ್ಯಕ್ರಿಯೆಗೆ  ಪೋಷಕರು  ಕುಟುಂಬಸ್ಥರು ಒಪ್ಪಿದ್ದಾರೆ.

ಮಂಗಳೂರು (ಜ.04): ಬಿಜೆಪಿ ಕಾರ್ಯಕರ್ತ ದೀಪಕ್ ಹತ್ಯೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ಬಿಟ್ಟು ಅಂತ್ಯಕ್ರಿಯೆಗೆ ಪೋಷಕರು, ಕುಟುಂಬಸ್ಥರು ಒಪ್ಪಿದ್ದಾರೆ.

ದಕ್ಷಿಣ ಕನ್ನಡ ಡಿಸಿ ಸಸಿಕಾಂತ್​ ಸೆಂಥಿಲ್ ಕುಟುಂಬಸ್ಥರ, ಹಿಂದೂ ಸಂಘಟನೆಯ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ ದೀಪಕ್​ ಮನೆ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರು ದೀಪಕ್​ ಮೃತದೇಹದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ. 

ಜನತಾ ಕಾಲೋನಿಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನೆರವೇರಲಿದೆ. ಅಂತ್ಯಕ್ರಿಯೆಗೂ ಮುನ್ನ ನಿವಾಸದಿಂದ ಗಣೇಶಪುರದವರೆಗೆ ಶವಯಾತ್ರೆ ಮಾಡಲು ನಿರ್ಧರಿಸಲಾಗಿದೆ