ರಜನಿಕಾಂತ್ ರಾಜಕೀಯ ಪ್ರವೇಶ ಖಚಿತವಾಗಿದೆ. ಹೊಸ ವರ್ಷಕ್ಕೆ ಸಿಹಿಸುದ್ದಿಯನ್ನು ನೀಡಲು ರೆಡಿಯಾಗಿದ್ದಾರೆ ತಲೈವಾ. ಈ ಬಗ್ಗೆ ಚೆನ್ನೈನ ರಾಘವೇಂದ್ರ ಹಾಲ್ನಲ್ಲಿ ರಜಿನಿಕಾಂತ್ ಅಭಿಮಾನಿಗಳ ಜೊತೆ ಇಂದು ಸಂವಾದ ನಡೆಸಿದ್ದಾರೆ.
ಚೆನ್ನೈ (ಡಿ.26): ರಜನಿಕಾಂತ್ ರಾಜಕೀಯ ಪ್ರವೇಶ ಖಚಿತವಾಗಿದೆ. ಹೊಸ ವರ್ಷಕ್ಕೆ ಸಿಹಿಸುದ್ದಿಯನ್ನು ನೀಡಲು ರೆಡಿಯಾಗಿದ್ದಾರೆ ತಲೈವಾ. ಈ ಬಗ್ಗೆ ಚೆನ್ನೈನ ರಾಘವೇಂದ್ರ ಹಾಲ್ನಲ್ಲಿ ರಜಿನಿಕಾಂತ್ ಅಭಿಮಾನಿಗಳ ಜೊತೆ ಇಂದು ಸಂವಾದ ನಡೆಸಿದ್ದಾರೆ.
ರಾಜಕೀಯಕ್ಕೆ ನಾನೇನು ಹೊಸಬನಲ್ಲ. ಡಿಸೆಂಬರ್ 31ಕ್ಕೆ ಅಂತಿಮ ನಿರ್ಧಾರ ತಿಳಿಸುತ್ತೇನೆ. ನನ್ನ ರಾಜಕೀಯ ಪ್ರವೇಶ, ವಿಷನ್ ಬಗ್ಗೆ ಅಂತಿಮ ನಿರ್ಧಾರ ತಿಳಿಸುವೆ ಎಂದು ಸೂಪರ್ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಯುದ್ಧಕ್ಕೆ ಇಳಿದರೆ ಜಯಿಸಬೇಕು. ನಾನು ಹೋರಾಟ ಮಾಡಿಯೇ ಮುಂದೆ ಬಂದವನು. ಹೋರಾಟ ಮಾಡಿದ್ರೆ ಗೆದ್ದೇ ಗೆಲ್ಲುತ್ತೇವೆ. 1990ರಿಂದಲೂ ರಾಜಕೀಯದಲ್ಲಿ ಇದ್ದೇನೆ. ತೋಳ್ಬಲ ಒಂದೇ ಇದ್ದರೆ ಸಾಲದು, ಬುದ್ಧಿಬಲವೂ ಬೇಕು ಎಂದಿದ್ದಾರೆ.
ಅಭಿಮಾನಿಗಳನ್ನು ಭೇಟಿಯಾಗಿದ್ದು ಸಂತೋಷವಾಗಿದೆ. ಸಭೆಗೆ ಆಗಮಿಸಿದ ಎಲ್ಲಾ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ.
