ಇಂದು ಮಧ್ಯರಾತ್ರಿಯಿಂದ ಪೆಟ್ರೋಲ್ ಬಂಕ್'ಗಳಲ್ಲಿ ಡೆಬಿಟ್​​, ಕ್ರೆಡಿಟ್ ಕಾರ್ಡ್ ಬಳಕೆ ಇಲ್ಲ. ಕಾರ್ಡ್ ಬಳಿಕೆ ಮೇಲೆ ಸರ್ವಿಸ್ ಚಾರ್ಜ್ ಜಾರಿ ಹಿನ್ನೆಲೆಯಲ್ಲಿ ಪೆಟ್ರೋಲ್ ಮಾಲಿಕರು ಗ್ರಾಹಕರಿಂದ ಕಾರ್ಡ್ ಪಡೆಯದಿರಲು ತೀರ್ಮಾನಿಸಿದ್ದಾರೆ.

ಬೆಂಗಳೂರು(ಜ.08): ಇಂದು ಮಧ್ಯರಾತ್ರಿಯಿಂದ ಪೆಟ್ರೋಲ್ ಬಂಕ್'ಗಳಲ್ಲಿ ಡೆಬಿಟ್​​, ಕ್ರೆಡಿಟ್ ಕಾರ್ಡ್ ಬಳಕೆ ಇಲ್ಲ. ಕಾರ್ಡ್ ಬಳಿಕೆ ಮೇಲೆ ಸರ್ವಿಸ್ ಚಾರ್ಜ್ ಜಾರಿ ಹಿನ್ನೆಲೆಯಲ್ಲಿ ಪೆಟ್ರೋಲ್ ಮಾಲಿಕರು ಗ್ರಾಹಕರಿಂದ ಕಾರ್ಡ್ ಪಡೆಯದಿರಲು ತೀರ್ಮಾನಿಸಿದ್ದಾರೆ.

ಪೆಟ್ರೋಲ್ ಬಂಕ್​​ ಮಾಲೀಕರ ಅಧ್ಯಕ್ಷ ರವೀಂದ್ರನಾಥ್​ ಈ ಕುರಿತಾಗಿ ಹೇಳಿಕೆ ನೀಡಿದ್ದು, ಡೆಬಿಟ್​​, ಕ್ರೆಡಿಟ್ ಕಾರ್ಡ್​ ಬಳಕೆ ಮೇಲೆ ಶೇ.1ರಷ್ಟು ಸರ್ವೀಸ್ ಚಾರ್ಜ್ ಹೇರುತ್ತಾರೆ. ಹೀಗಾಗಿ ಪೆಟ್ರೋಲ್​ ಬಂಕ್​'ಗಳಲ್ಲಿ ಗ್ರಾಹಕರಿಂದ ಕಾರ್ಡ್​ ಪಡೆಯದಿರಲು ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.