ತಮ್ಮ ಜೀವಕ್ಕೂ ಬೆದರಿಕೆ ಇದೆ ಎಂದು ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಲೋಕಸಭಾ ಕಾಂಗ್ರೆಸ್‌ ಸಂಸದೀಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿದ್ದಾರೆ.

ಕಲಬುರಗಿ: ತಮ್ಮ ಜೀವಕ್ಕೂ ಬೆದರಿಕೆ ಇದೆ ಎಂದು ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಲೋಕಸಭಾ ಕಾಂಗ್ರೆಸ್‌ ಸಂಸದೀಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿದ್ದಾರೆ.

ಕಾರ‍್ಯಕ್ರಮವೊಂದರಲ್ಲಿ ಮಾತನಾಡಿ, ಜನಸೇವಕನಾಗಿ ಸಾರ್ವಜನಿಕ ಬದುಕಲ್ಲಿರುವ ತಮ್ಮನ್ನು ಗುರಿಯಾಗಿಸಿಕೊಂಡು ವಾಟ್ಸಪ್‌- ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲ ತಾಣಗಳಲ್ಲಿ ಸಲ್ಲದ ವಿಚಾರ ಪ್ರಸ್ತಾಪಿಸುತ್ತಾ ನಿಂದಿಸಲಾಗುತ್ತಿದೆ ಎಂದು ವಿಷಾದಿಸುತ್ತಲೇ ಜೀವ ಬೆದರಿಕೆ ಮಾತುಗಳನ್ನಾಡಿದರು.

‘ನಾನೇನ್‌ ಇಂತಹ ಜೀವ ಬೆದರಿಕೆಗಳಿಗೆ ಹೆದರೋನಲ್ಲ, ನಾನು ಬದುಕುತ್ತಿರೋದೇ ಬೋನಸ್‌ ಆಯುಷ್ಯದಲ್ಲಿ. 6 ವರ್ಷದವನಿದ್ದಾಗ ಮನೆಗೇ ಬೆಂಕಿ ಬಿತ್ತು. ಆಗ ಕುಟುಂಬದ ಬಹುತೇಕ ಸದಸ್ಯರು ಅಗ್ನಿ ದುರಂತದಲ್ಲಿ ಅಸುನೀಗಿದರು. ನಾನೊಬ್ಬನೇ ಬದುಕುಳಿದವ. ಸಾಯೋದಿದ್ರೆ ಸಾಯಬೇಕಿತ್ತು. ಹಾಗಾಗಲಿಲ್ಲ, ನಿಮ್ಮೆಲ್ಲರ ಆಶಿರ್ವಾದದಿಂದ ಜನಸೇಕನಾಗಿರುವ ನನಗೀಗ 76 ವರ್ಷ. ಈ 70 ವರ್ಷ ನಾನು ಬದುಕಿದ್ದದ್ದೇ ಬೋನಸ್‌’ ಎಂದರು.

ಚಾಲೀಸ್‌ ಸಾಲ್‌ ನಾನೇನ್‌ ಸಿಎಂ ಆಗಿದ್ನಾ?:

ಚಾಲೀಸ್‌ ಸಾಲ್‌ ಖರ್ಗೆ ಕ್ಯಾ ಕಿಯಾ ಅಂತಾರೆ? ಅರೆ, 40 ವರ್ಷ ನಾನೇನ್‌ ಸಿಎಂ ಆಗಿದ್ನಾ? ಗುರುಮಠಕಲ್‌ನಿಂದಲೇ 38 ವರ್ಷ ಶಾಸಕನಾಗಿದ್ದೆ. ನಾನು ಏನ್‌ ಮಾಡಿದ್ದೇನೆ ಅನ್ನೋದು ಗುರುಮಠಕಲ್‌ ಜನರಿಗೆ ಗೊತ್ತಿದೆ. ವಿನಾಕಾರಣ ಖರ್ಗೆ ಮಾಡಿದ್ದೇನು ಅಂತಾರ? ಹೀಂಗ ಹೇಳುವವರು ಮಾರ್ಕೆಟಿಂಗ್‌ನಲ್ಲಿ ತುಂಬ ಜೋರ್‌ ಇದ್ದಾರ. ಅಬ್ಬರದ ಪ್ರಚಾರ ಮಾಡ್ಕೊಂತ ಬಂದವರಿಗೇ ನೀವೂ ನಂಬಿ ಅವರ ಹಿಂದೆನೇ ಹೋಗ್ತೀರಿ ಎಂದು ಸೇರಿದ್ದ ಜನತೆಯ ಗಮನ ಸೆಳೆದರು.