ಪ್ರಧಾನಿ ಮೋದಿಯವರೇ, ಗುಜರಾತ್, ಹಿಮಾಚಲ ಪ್ರದೇಶ ಗೆಲುವಿಗೆ ಶುಭಾಶಯಗಳು. ಆದರೆ, ನೀವು ಸಂತೋಷವಾಗಿದ್ದೀರಾ? ಎಂದು ಟ್ವಿಟರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.

ಬೆಂಗಳೂರು (ಡಿ.18): ಪ್ರಧಾನಿ ಮೋದಿಯವರೇ, ಗುಜರಾತ್, ಹಿಮಾಚಲ ಪ್ರದೇಶ ಗೆಲುವಿಗೆ ಶುಭಾಶಯಗಳು. ಆದರೆ, ನೀವು ಸಂತೋಷವಾಗಿದ್ದೀರಾ? ಎಂದು ಟ್ವಿಟರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.
ನಿಮ್ಮ ವಿಕಾಸ ಸಿದ್ಧಾಂತ ಎಲ್ಲಿ ಹೋಯ್ತು? 150+ ಸೀಟು ಗೆಲುವು ಏನಾಯ್ತು? ಒಡೆದು ಆಳುವ ನೀತಿ ಕೆಲಸ ಮಾಡಲಿಲ್ಲ. ಪಾಕಿಸ್ತಾನ, ಧರ್ಮ, ಜಾತಿಗಳಿಗಿಂತ ನಮ್ಮ ದೇಶ ದೊಡ್ಡದು ಎಂದು ಪ್ರಕಾಶ್ ರೈ ಟ್ವೀಟಿಸಿದ್ದಾರೆ. 

ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಸಮಸ್ಯೆಗಳಿವೆ. ಗ್ರಾಮೀಣ ಭಾಗದ ಬಡವರು, ರೈತರ ಧ್ವನಿಯನ್ನು ಕಡೆಗಣಿಸಲಾಗಿದೆ. ನೀವು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತೀರಾ? #Justasking ಎಂದು ಪ್ರಕಾಶ್ ರೈ ಟ್ವೀಟಿಸಿದ್ದಾರೆ.

Scroll to load tweet…