ಪ್ಯಾರಾಸಿಟಮಲ್‌ ಗುಳಿಗೆಯಲ್ಲಿ ಡೆಡ್ಲಿ ವೈರಸ್‌ ಪತ್ತೆಯಾಗಿರುವುದು ಸತ್ಯವೇ?

news | Wednesday, March 28th, 2018
Suvarna Web Desk
Highlights

ಜ್ವರ ಬಂದಾಗ ಜನರು ಸಾಮಾನ್ಯವಾಗಿ ತೆಗೆದುಕೊಳ್ಳುವ ಪ್ಯಾರಾಸಿಟಮಲ್‌ ಗುಳಿಗೆಯಲ್ಲಿ ಡೆಡ್ಲಿ ವೈರಸ್‌ ಇದೆ ಎಂಬಂತಹ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಜ್ವರ ಬಂದಾಗ ಜನರು ಸಾಮಾನ್ಯವಾಗಿ ತೆಗೆದುಕೊಳ್ಳುವ ಪ್ಯಾರಾಸಿಟಮಲ್‌ ಗುಳಿಗೆಯಲ್ಲಿ ಡೆಡ್ಲಿ ವೈರಸ್‌ ಇದೆ ಎಂಬಂತಹ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೀಗೆ ಹರಿದಾಡುತ್ತಿರುವ ಸಂದೇಶದಲ್ಲಿ, ‘ಎಚ್ಚರಿಕೆ! P/500 ಎಂದು ಬರೆಯಲ್ಪಟ್ಟಪ್ಯಾರಸಿಟಮಲ್ ಗುಳಿಗೆಯನ್ನು ತೆಗೆದುಕೊಳ್ಳಬಾರದು.

ಇದು ಅತ್ಯಂತ ಬಿಳಿಯಾಗಿದೆ ಮತ್ತು ಹೊಳೆಯುವಂತಿದೆ. ಇದರಲ್ಲಿ ‘ಮ್ಯಾಚುಪೋ’ ಎಂಬ ವೈರಸ್‌ ಇದೆಯೆಂದು ವೈದ್ಯರು ಖಚಿತಪಡಿಸಿದ್ದಾರೆ. ಇದು ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ವೈರಸ್‌ಗಳಲ್ಲಿ ಒಂದಾಗಿದ್ದು, ಮರಣ ಪ್ರಮಾಣ ದರದ ಹೆಚ್ಚಳಕ್ಕೆ ಕಾರಣವಾಗಿದೆ.

ದಯವಿಟ್ಟು ನಿಮ್ಮ ಸಂಪರ್ಕದಲ್ಲಿರುವ ಪ್ರತಿಯೊಬ್ಬರಿಗೂ ಈ ಸಂದೇಶವನ್ನು ತಲುಪಿಸಿ ಮತ್ತು ಜೀವವನ್ನು ಉಳಿಸಿ’ ಎಂದು ಹೇಳಲಾಗಿದೆ. ಆದರೆ ನಿಜಕ್ಕೂ P/500 ಎಂದು ಬರೆದಿರುವ ಪ್ಯಾರಾಸಿಟಮಲ್‌ ಗುಳಿಗೆಯಲ್ಲಿ ಅಪಾಯಕಾರಿ ವೈರಸ್‌ ಇರುವುದು ಸತ್ಯವೇ ಎಂದು ಹುಡುಕ ಹೊರಟಾಗ ಇದೊಂದು ವದಂತಿ.

 ಇದರಲ್ಲಿ ಯಾವುದೇ ಹುರುಳಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ರೀತಿ ವದಂತಿಗಳು ಬಹಳ ಹಿಂದಿನಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ಕಂಡ ‘ಸಾರ್ವಜನಿಕ ಆರೋಗ್ಯ ಇಲಾಖೆ’ ಈ ಬಗ್ಗೆ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ಇದೊಂದು ವದಂತಿ, ಇದನ್ನು ನಂಬಬೇಡಿ. ‘ಮ್ಯಾಚುಪೋ’ ವೈರಸ್‌ ಪ್ಯಾರಾಸಿಟಮಲ್‌ ಗುಳಿಗೆಯಲ್ಲಿ ಪತ್ತೆಯಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ಅಲ್ಲದೆ ಇಂಡೋನೇಷಿಯಾದ ಆಹಾರ ಮತ್ತು ಔಷಧಾಲಯ ಸಚಿವಾಲಯ ಕೂಡ ‘ಇದೊಂದು ವದಂತಿಯಾಗಿದ್ದು, ಮ್ಯಾಚುಪೋ ಎಂಬ ವೈರಸ್‌ ಪ್ಯಾರಾಸಿಟಮಲ್‌ ಗುಳಿಗೆಯಂತಹ ಒಣ ಪ್ರದೇಶದಲ್ಲಿ ಜೀವಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟೀಕರಣ ನೀಡಿದೆ. ಹಾಗಾಗಿ ಪ್ಯಾರಾಸಿಟಮಲ್‌ ಗುಳಿಗೆಯಲ್ಲಿ ಡೆಡ್ಲಿ ವೈರಸ್‌ ಇದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು.

Comments 0
Add Comment

    ಮಾನವೀಯ ಮರೆತ ಜನ :ಮಕ್ಕಳ ಕಳ್ಳನೆಂದು ಹಲ್ಲೆಗೀಡದ ವ್ಯಕ್ತಿ ಸಾವು

    news | Wednesday, May 23rd, 2018